Home News ವಿದ್ಯಾವಂತೆ ಎಂಬ ಕಾರಣಕ್ಕೆ ಮಹಿಳೆಯನ್ನು ಕೆಲಸ ಮಾಡುವಂತೆ ಒತ್ತಾಯಿಸುವಂತಿಲ್ಲ- ಹೈಕೋರ್ಟ್ !!

ವಿದ್ಯಾವಂತೆ ಎಂಬ ಕಾರಣಕ್ಕೆ ಮಹಿಳೆಯನ್ನು ಕೆಲಸ ಮಾಡುವಂತೆ ಒತ್ತಾಯಿಸುವಂತಿಲ್ಲ- ಹೈಕೋರ್ಟ್ !!

Hindu neighbor gifts plot of land

Hindu neighbour gifts land to Muslim journalist

ಮಹಿಳೆಯರ ಕುರಿತಾಗಿ ಬಾಂಬೆ ಹೈಕೋರ್ಟ್ ವಿಶೇಷ ಕಾಳಜಿ ತೋರಿಸಿದೆ. ವಿದ್ಯಾವಂತೆ ಎನ್ನುವ ಕಾರಣಕ್ಕೆ ಮಹಿಳೆಯನ್ನು ಜೀವನ ನಿರ್ವಹಣೆಗೆ ದುಡಿಯುವಂತೆ ಒತ್ತಾಯಿಸುವಂತಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪುಣೆಯ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿದೆ. ಅರ್ಜಿಯಲ್ಲಿ ವಿಚ್ಛೇದಿತ ಪತ್ನಿ ಪ್ರಸ್ತುತ ಸ್ಥಿರ ಆದಾಯದ ಮೂಲ ಹೊಂದಿದ್ದಾರೆ. ಆದರೆ ನ್ಯಾಯಾಲಯದಿಂದ ಸತ್ಯವನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿದ್ದರು.

ಈ ಕುರಿತು ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಮಹಿಳೆ ಶೈಕ್ಷಣಿಕ ಪದವಿ, ಅರ್ಹತೆ ಹೊಂದಿದ್ದರೂ ಕೆಲಸ ಮಾಡಬಹುದು, ಇಲ್ಲವೇ ಮನೆಯಲ್ಲೇ ಉಳಿಯುವ ಆಯ್ಕೆ ಮಾಡಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.

ಮನೆಯ ಮಹಿಳೆ ಆರ್ಥಿಕವಾಗಿ ಕೊಡುಗೆ ನೀಡಬೇಕು ಎಂಬುದನ್ನು ನಮ್ಮ ಸಮಾಜ ಇನ್ನೂ ಒಪ್ಪಿಕೊಂಡಿಲ್ಲ. ಏಕೆಂದರೆ ಅದು ಮಹಿಳೆಯ ಆಯ್ಕೆಯಾಗಿದೆ. ಆದ್ದರಿಂದ ಕೆಲಸಕ್ಕೆ ಹೋಗುವಂತೆ ಒತ್ತಾಯಿಸಲಾಗುವುದಿಲ್ಲ. ಪದವೀಧರಳು ಎಂಬ ಕಾರಣಕ್ಕೆ ಕುಳಿತುಕೊಳ್ಳಬಾರದು ಎಂದು ಹೇಳಲು ಸಾಧ್ಯವಿಲ್ಲ. ಉದಾಹರಣೆಗೆ `ನಾನಿಂದು ನ್ಯಾಯಧೀಶನಾಗಿದ್ದೇನೆ, ನಾಳೆ ಮನೆಯಲ್ಲೇ ಕುಳಿತುಕೊಳ್ಳಬಹುದು. ಆಗ ನಾನು ನ್ಯಾಯಾಧೀಶನಾಗಲು ಅರ್ಹನಾಗಿದ್ದೇನೆ ಮನೆಯಲ್ಲಿ ಕುಳಿತುಕೊಳ್ಳಬಾರದು’ ಎಂದು ಹೇಳುತ್ತೀರಾ ಎಂದು ಪ್ರಶ್ನಿಸಿದೆ.

ಈ ಎಲ್ಲ ಅಂಶಗಳನ್ನು ಪರಿಗಣಿಸಿದ ಕೌಟುಂಬಿಕ ನ್ಯಾಯಾಲಯವು ಆಕೆ ಪತಿಯೊಂದಿಗೆ ವಿಚ್ಛೇದನ ಪಡೆದ ನಂತರ ಜೀವನಾಂಶ ಪಡೆಯುವ ಸಾಮರ್ಥ್ಯ ಹೊಂದಿರುತ್ತಾಳೆ ಎಂದು ಹೇಳಿದೆ. ಜೊತೆಗೆ ಅರ್ಜಿದಾರರು ಪತ್ನಿಗೆ ಪ್ರತಿ ತಿಂಗಳು 5 ಸಾವಿರ ಹಾಗೂ ಪ್ರಸ್ತುತ 13 ವರ್ಷದ ಮಗಳು ತಾಯಿಯೊಂದಿಗೆ ವಾಸಿಸುತ್ತಿರುವುದರಿಂದ ಮಗಳ ನಿರ್ವಹಣೆಗಾಗಿ 7 ಸಾವಿರ ಪಾವತಿಸಲು ನ್ಯಾಯಾಲಯ ಸೂಚಿಸಿದೆ.