ಬೆಳ್ತಂಗಡಿ : ಹಿಂದೂ ರುದ್ರಭೂಮಿಯ ನಾಮಫಲಕ ಧ್ವಂಸ ಮಾಡಿದ ದುಷ್ಕರ್ಮಿಗಳು!

Share the Article

ಬೆಳ್ತಂಗಡಿ: ಹಿಂದೂ ರುದ್ರಭೂಮಿಯ ನಾಮಫಲಕ ಧ್ವಂಸ ಮಾಡಿರುವ ಘಟನೆ ಮಡಂತ್ಯಾರು ಗ್ರಾಮದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮಂಜಲ್ ಪಲ್ಕೆ ಎಂಬ ಪ್ರದೇಶದಲ್ಲಿ ಹಾಕಲಾಗಿರುವ ಹಿಂದೂ ರುದ್ರಭೂಮಿ ನಾಮಫಲಕವನ್ನು ಯಾರೋ ಕಿಡಿಗೇಡಿಗಳು ನಿನ್ನೆ ರಾತ್ರಿ ಹಾನಿಗೊಳಿಸಿದ್ದಾರೆ.

ಇದನ್ನು ತಿಳಿದ ತಕ್ಷಣ ಹಿಂದೂ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಯಾರೇ ಈ ಕೃತ್ಯವನ್ನು ಎಸಗಿರಲಿ ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಬೆಳ್ತಂಗಡಿ ಭಜರಂಗದಳ ಸಂಚಾಲಕ ಸಂತೋಷ ಅತ್ತಾಜೆ ಹೇಳಿದ್ದಾರೆ.

Leave A Reply