ಭರ್ಜರಿ ರಿಯಾಯಿತಿ ಬೆಲೆಗೆ ಲಭ್ಯವಾಗಲಿದೆ ಒನ್ಪ್ಲಸ್ ಸ್ಮಾರ್ಟ್ ಫೋನ್
ಒನ್ಪ್ಲಸ್ ಮೊಬೈಲ್ ಎಲ್ಲಾ ಬಳಕೆದಾರರ ಆಕರ್ಷಿತ ಫೋನ್ ಆಗಿದೆ. ಈ ಸಂಸ್ಥೆಯ ಜನಪ್ರಿಯ ಫೋನ್ಗಳ ಪೈಕಿ ಒಂದಾದ ಒನ್ಪ್ಲಸ್ 9 ಪ್ರೊ ಆಕರ್ಷಕ ಫೀಚರ್ಸ್ಗಳಿಂದ ಗ್ರಾಹಕರನ್ನು ಸೆಳೆದಿದ್ದು, ಇದೀಗ ಭರ್ಜರಿ ರಿಯಾಯಿತಿ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.
ಹೌದು, ಒನ್ಪ್ಲಸ್ 9 ಪ್ರೊ ಫೋನಿನ 8GB + 128GB ಸ್ಟೋರೇಜ್ ವೇರಿಯಂಟ್ ಇದೀಗ 49,999 ರೂ. ಲಭ್ಯವಿದೆ. 12GB + 256GB ಸ್ಟೋರೇಜ್ ವೇರಿಯಂಟ್ 54,999ರೂ. ಗಳ ಬೆಲೆಗೆ ಲಭ್ಯವಿದೆ. ಗ್ರಾಹಕರು ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ಒನ್ಪ್ಲಸ್ 9 ಪ್ರೊ ಫೋನ್ ಅನ್ನು 5,000 ರೂ. ವರೆಗೆ ರಿಯಾಯಿತಿಯಲ್ಲಿ ಖರೀದಿಸಬಹುದು. ಹಾಗೆಯೇ ಅಮೆರಿಕನ್ ಎಕ್ಸ್ಪ್ರೆಸ್ ಕಾರ್ಡ್ನಲ್ಲಿ 10% ಕ್ಯಾಶ್ಬ್ಯಾಕ್ ಕೊಡುಗೆ ಲಭ್ಯ ಇದೆ. ಇದರ ಜೊತೆಗೆ, ಒನ್ಪ್ಲಸ್ ಗ್ರಾಹಕರಿಗೆ ಸ್ಪಾಟಿಫೈ ಪ್ರೀಮಿಯಂಗೆ ಆರು ತಿಂಗಳ ಉಚಿತ ಚಂದಾದಾರಿಕೆ ಸಹ ಲಭ್ಯವಾಗಲಿದೆ. ಇನ್ನು ಸಿಟಿ ಬ್ಯಾಂಕ್ ಕೊಡುಗೆಯು ಜೂನ್ 30, 2022 ರವರೆಗೆ ಮಾತ್ರ ಲಭ್ಯ.
ಒನ್ಪ್ಲಸ್ 9 ಪ್ರೊ ಸ್ಮಾರ್ಟ್ಫೋನ್ 1,440 x 3,216 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.7 ಇಂಚಿನ 2.0 AMOLED ಡಿಸ್ಪ್ಲೇಯನ್ನು ಹೊಂದಿದ್ದು, ಡಿಸ್ಪ್ಲೇಯ ಅನುಪಾತವು 19.8:9 ಆಗಿದೆ. ಹಾಗೆಯೇ ಡಿಸ್ಪ್ಲೇಯು HDR 10+ ಸಫೋರ್ಟ್ ಜೊತೆಗೆ LTPO ತಂತ್ರಜ್ಞಾನ ಪಡೆದಿದೆ. ಇನ್ನು ಈ ಫೋನ್ 120Hz ಸ್ಕ್ರೀನ್ ರೀಫ್ರೇಶ್ ರೇಟ್ ಹೊಂದಿದೆ.
ಒನ್ಪ್ಲಸ್ 9 ಪ್ರೊ ಸ್ಮಾರ್ಟ್ಫೋನ್ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 888 SoC ಪ್ರೊಸೆಸರ್ ಅನ್ನು ಹೊಂದಿದೆ. ಅದರೊಂದಿಗೆ ಒನ್ಪ್ಲಸ್ ಕೂಲ್ ಪ್ಲೇ ಮಲ್ಟಿ ಲೇಯರ್ ಕೂಲಿಂಗ್ ತಂತ್ರಜ್ಞಾನ ಒಳಗೊಂಡಿದೆ. ಹಾಗೆಯೇ ಈ ಪ್ರೊಸೆಸರ್ ಆಂಡ್ರಾಯ್ಡ್ ಆಕ್ಸಿಜೆನ್ 11 ಓಎಸ್ ಬೆಂಬಲವನ್ನು ಪಡೆದುಕೊಂಡಿದೆ. ಇನ್ನು ಈ ಫೋನ್ಗಳು ಎರಡು ವೇರಿಯಂಟ್ ಮಾದರಿಗಳ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ 8GB/12GB RAM ಮತ್ತು 128GB/256GB ಆಗಿವೆ.
ಒನ್ಪ್ಲಸ್ 9 ಪ್ರೊ ಸ್ಮಾರ್ಟ್ಫೋನ್ ಕ್ವಾಡ್ ಕ್ಯಾಮೆರಾ ಸೆಟ್ಅಪ್ ಪಡೆದಿದೆ. 48 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ, 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ, 8 ಮೆಗಾ ಪಿಕ್ಸಲ್ ಸಾಮರ್ಥ್ಯ ಹಾಗೂ 2 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿಗಾಗಿ 16 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. 4,500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಫೋನ್ ಸಹ 65T Warp ಚಾರ್ಜ್ ಸಪೋರ್ಟ್ ಹಾಗೂ Warp ಚಾರ್ಜ್ 50w ಸಾಮರ್ಥ್ಯದ ವಾಯರ್ ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಹಾಗೂ ಇತ್ತೀಚಿನ ಅಗತ್ಯ ಕನೆಕ್ಟಿವಿಟಿ ಸೌಲಭ್ಯಗಳನ್ನು ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5 ಜಿ, 4 ಜಿ ಎಲ್ ಟಿಇ, ವೈ-ಫೈ 6, ಬ್ಲೂಟೂತ್ 5.2, ಜಿಪಿಎಸ್ / ಎ-ಜಿಪಿಎಸ್, ಎನ್ಎಫ್ಸಿ, ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ಸೇರಿವೆ.