ಹುಂಜದ ಮಾಲೀಕ ಸಾರಾಯಿ ಕುಡಿಯಲ್ಲ ಆದರೆ ಹುಂಜ ಸಾರಾಯಿ ಇಲ್ಲದೆ ಬದುಕಲ್ಲ ಏನು ಈ ವಿಚಿತ್ರ ಘಟನೆ
ಈ ಹುಂಜದ ನೈಜ ಕತೆ ಕೇಳಿದರೆ ಎಲ್ಲರೂ ಶಾಕ್ ಆಗುತ್ತೀರಿ. ಈ ಕಿಲಾಡಿ ಹುಂಜಕ್ಕೆ ದಿನವೂ ಒಂದು ಗುಕ್ಕು ಶರಾಬು ಬೇಕೆ ಬೇಕು !
ಮಹಾರಾಷ್ಟ್ರದ ಭಂಡಾರ ಜಿಲ್ಲೆಯಲ್ಲಿರುವ ಈ ಹುಂಜವೆ ಮದ್ಯ ವಿಲ್ಲದೆ ದಿನ ಕಳೆಯಲು ಇಷ್ಟ ಪಡದ ಕಿರಿಕ್ ಕೋಳಿ !
ಹುಂಜಕ್ಕೆ ಲೋಕಲ್ ಮದ್ಯ ಅಲ್ಲ, ಫಾರೀನ್ ಮದ್ಯವೇ ಜೀವ ಉಳಿಸುವ ಔಷಧಿಯಾಗಿದೆ. ಎಣ್ಣೆ ಇಲ್ಲ ಅಂದ್ರೆ ಈ ಹುಂಜ ನೀರು ಕೂಡ ಮುಟ್ಟಲ್ಲ. ಇದು ಹೇಗೆ ಇಲ್ಲಿದೆ ನೋಡಿ ಸತ್ಯ ಘಟನೆ.
ಭಂಡಾರ ಜಿಲ್ಲೆಯ ಪಿಪರಿ ಗ್ರಾಮದ ನಿವಾಸಿ ಭಾವು ಕಟೋರೆ ಕೋಳಿ ಸಾಕಾಣಿಕೆ ವೃತ್ತಿಯಲ್ಲಿದ್ದಾರೆ. ಅನೇಕ ರೀತಿಯ ಕೋಳಿಗಳನ್ನು ತಮ್ಮ ಫಾರ್ಮ್ನಲ್ಲಿ ಬೆಳೆಸುತ್ತಿದ್ದಾರೆ. ಆದರೆ, ಈ ಹುಂಜವೊಂದು ಶಾರಾಯಿ ಅಮಲು ಹತ್ತಿಸಿಕೊಂಡು ಕುಡಿಯುವ ಚಟವಿರುವ ಹುಂಜವಾಗಿ ಪರಿವರ್ತನೆಯಾಗಿದೆ.
ಒಂದು ದಿನ ಹುಂಜ ಅನಾರೋಗ್ಯಕ್ಕೀಡಾಗಿದ್ದು, ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹುಂಜಗೆ ಸ್ಥಳೀಯ ವ್ಯಕ್ತಿಯ ಸಲಹೆಯ ಮೇರೆಗೆ ಕಟೋರೆ ಅವರು ಮದ್ಯ ಸೇವನೆ ಮಾಡಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಹುಂಜ ಸಂಪೂರ್ಣ ಚೇತರಿಸಿಕೊಂಡು, ಸಹಜ ಜೀವನಕ್ಕೆ ಮರಳಿತು. ಆದರೆ ಈ ದಿನದಿಂದ ಹುಂಜ ಆಹಾರ ಸೇವಿಸಲ್ಲ, ಬರೀ ಮದ್ಯಸೇವನೆಯ ಹುಚ್ಚಿನಲ್ಲಿದೆ. ಹುಂಜದ ಮಾಲೀಕ ಇದುವರೆಗೆ ಮದ್ಯ ಕುಡಿದಿಲ್ಲ, ಆದರೆ ಈ ಹುಂಜ ಮದ್ಯವಿಲ್ಲದೆ ಬದುಕಲ್ಲ.
ಇದೀಗ ಹುಡುಗು ಬುದ್ದಿಯ ಹುಂಜನಿಗೆ ನಿತ್ಯವೂ ಎಣ್ಣೆ ಬೇಕೇ ಬೇಕು. ಹುಂಜನಿಗೆಂದೇ ಪ್ರತಿ ತಿಂಗಳು 2 ಸಾವಿರ ರೂಪಾಯಿ ಖರ್ಚಾಗುತ್ತಿದೆ. ಈ ವೆಚ್ಚವನ್ನು ಭರಿಸಲು ಸಾಧ್ಯವಾಗದೇ ಕಟೋರೆ ಅವರು ಪಶುವೈದ್ಯರನ್ನು ಸಂಪರ್ಕಿಸಿದ್ದಾರೆ. ಅತ್ತ ತಮ್ಮ ಪ್ರೀತಿಯ ಹುಂಜ ಆಹಾರವಿಲ್ಲದೆ ಬಳಲುವುದನ್ನು ಅವರು ಸಹಿಸಿಕೊಳ್ಳಲಾಗದು. ಆದರೆ ತನ್ನ ಚಟದ ಕಾರಣದಿಂದ ಹುಂಜವು ತನ್ನ ಮಾಲೀಕರ ಕೈಯಲ್ಲಿ ತಿಂಗಳಿಗೆ 2 ಸಾವಿರ ಕ್ಕಿಂತಲೂ ಅಧಿಕ ದುಡ್ಡು ಖರ್ಚು ಮಾಡಿಸಿಕೊಳ್ಳುತ್ತಿದ್ದಾನೆ. ಹಾಗಾಗಿ ಪಶುವೈದ್ಯರು ಮದ್ಯ ವರ್ಜನೆಯ ವಾಸನೆಯುಳ್ಳ ವಿಟಮಿನ್ ಮಾತ್ರೆಗಳನ್ನು ನೀಡಲು ಪ್ರಾರಂಭಿಸುವುದು ಸೂಕ್ತ ಎಂದು ಕಟೋರೆಗೆ ಅವರು ಸಲಹೆ ನೀಡಲಾಗಿದೆ. ಹುಂಜ ಮಾತ್ರೆ ತಿಂದು ಮದ್ಯವರ್ಜನ ಮಾಡಿ ಒಳ್ಳೆ ಜನ ಆಗ್ತಾನಾ ಇಲ್ಲಾ ಚಟ ಕಂಟಿನ್ಯೂ ಆಗತ್ತಾ ಕಾದು ನೋಡಬೇಕಷ್ಟೇ !