ಕಾರಿನೊಳಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಡೋರ್‌ ಲಾಕ್‌ ಆಗಿ ಮೂರು ಮಕ್ಕಳು ಉಸಿರುಗಟ್ಟಿ ಸಾವು!

Share the Article

ತಮಿಳುನಾಡು: ಕಾರಿನೊಳಗೆ ಮಕ್ಕಳು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಡೋರ್‌ ಲಾಕ್‌ ಆಗಿ ಮೂರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಿನ್ನೆ ತಿರುನಲ್ವೇಲಿಯಲ್ಲಿ ನಡೆದಿದೆ.

ಮೃತ ಮಕ್ಕಳನ್ನು ನಿತೀಶ್ (7), ಆತನ ಸಹೋದರಿ ನಿತೀಶಾ (5) ಮತ್ತು ಕಪಿಚಂದ್ (4) ಎಂದು ಗುರುತಿಸಲಾಗಿದೆ.

ನಿತೀಶ್ ಮತ್ತು ನಿತೀಶಾ ಇಬ್ಬರೂ ನಾಗರಾಜ ಎಂಬುವರ ಮಕ್ಕಳಾಗಿದ್ದು, ಕಪಿಚಂದ್ ಸುಧಾಕರ್ ಎಂಬುವರ ಮಗ ಎನ್ನಲಾಗಿದೆ. ಇವರು ತಿರುನೆಲ್ವೇಲಿ ಜಿಲ್ಲೆಯ ಪಾನಕುಡಿ ಸಮೀಪದ ವಸತಿ ಪ್ರದೇಶದಲ್ಲಿ ನಾಗರಾಜನ ಸಹೋದರ ಮಣಿಕಂದನ್‌ಗೆ ಸೇರಿದ ಕಾರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ಕಾರಿನ ಡೋರ್‌ ಲಾಕ್‌ ಆಗಿದ್ದರಿಂದ ಹೊರಗೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಮೂವರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಪೋಷಕರು ತಮ್ಮ ಮಕ್ಕಳು ಎಷ್ಟು ಸಮಯವಾದರೂ ಕಾಣದ್ದರಿಂದ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಮಕ್ಕಳು ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದು, ಈ ಬಗ್ಗೆ ಪಣಕುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave A Reply