ಬೆಳ್ತಂಗಡಿ: ಲೌಡ್ ಸ್ಪೀಕರ್ ಹಾಕದಂತೆ ಎಲ್ಲಾ ಧರ್ಮದ ಸದಸ್ಯರೊಂದಿಗೆ ಪೊಲೀಸ್ ಸ್ಟೇಷನ್ ನಲ್ಲಿ ಸಭೆ
ಬೆಳ್ತಂಗಡಿ : ಲೌಡ್ ಸ್ಪೀಕರ್ ಹಾಕದಂತೆ ಎಲ್ಲ ಧರ್ಮದ ಸದಸ್ಯರೊಂದಿಗೆ ಸೇರಿ ಬೆಳ್ತಂಗಡಿ ಪೊಲೀಸ್ ಸ್ಟೇಷನ್ ನಲ್ಲಿ ಇಂದು ಸಮಾಲೋಚನಾ ಸಭೆ ನಡೆಸಿದರು.
ಲೌಡ್ ಸ್ಪೀಕರ್ಗಳು ಮತ್ತು ಸಾರ್ವಜನಿಕ ವಿಳಾಸ ವ್ಯವಸ್ಥೆಯನ್ನು ಬಳಸುವ ಎಲ್ಲಾ ಆವರಣಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಇದನ್ನು ತಕ್ಷಣದ ಪರಿಣಾಮದೊಂದಿಗೆ ಕಾರ್ಯಗತಗೊಳಿಸಲು ಅಗತ್ಯವಿರುವ ಸರ್ಕಾರಿ ನಿರ್ದೇಶನಗಳನ್ನು ಸಂಬಂಧಪಟ್ಟವರಿಗೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಾರ್ಗಸೂಚಿ ಪ್ರಕಾರ, ಧ್ವನಿವರ್ಧಕಗಳು ಅಥವಾ ಸಾರ್ವಜನಿಕ ವಿಳಾಸ ವ್ಯವಸ್ಥೆಯನ್ನು ಬಳಸುವ ಎಲ್ಲಾ ಬಳಕೆದಾರರು 15 ದಿನಗಳೊಳಗೆ ಗೊತ್ತುಪಡಿಸಿದ ಪ್ರಾಧಿಕಾರದಿಂದ ಲಿಖಿತ ಅನುಮತಿಯನ್ನು ಪಡೆಯಬೇಕು. ಪಡೆಯದವರು ಸ್ವಯಂಪ್ರೇರಣೆಯಿಂದ ತೆಗೆದುಹಾಕಬೇಕು ಅಥವಾ ಗೊತ್ತುಪಡಿಸಿದ ಪ್ರಾಧಿಕಾರವು ತೆಗೆದುಹಾಕಲು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದೆ.
ಶಬ್ದ ಮಾಲಿನ್ಯ ನಿಯಮಗಳು 2000:
ನಿಯಮ 3(1) ಅಡಿಯಲ್ಲಿ ಹೇಳಿರುವಂತೆ ‘ಹಗಲಿನ ಸಮಯ’ ಎಂದರೆ ಬೆಳಗ್ಗೆ 6.00 ರಿಂದ ಬೆಳಗ್ಗೆ 10.00 ರವರೆಗೆ ಬಳಸಬಹುದು ಮತ್ತು ರಾತ್ರಿಯ ಸಮಯ ಎಂದರೆ ರಾತ್ರಿ 10.00 ರಿಂದ ಬೆಳಗ್ಗಿನ ಜಾವ 6.00 ರವರೆಗೆ ಸಾರ್ವಜನಿಕವಾಗಿ ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ. ಉಳಿದ ಸಮಯದಲ್ಲಿ ಧ್ವನಿವರ್ಧಕ ಬಳಕೆ ಮಾಡಲು ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆದಿರಬೇಕು.
ಎಲ್ಲ ಪೊಲೀಸ್ ಕಮಿಷನರೇಟ್ ಪ್ರದೇಶಗಳಲ್ಲಿ – ಸಹಾಯಕ ಪೊಲೀಸ್ ಕಮಿಷನರ್ ಜುರಿಸ್ಡಿಕ್ಷನಲ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿಧಿ, ಇತರ ಪ್ರದೇಶಗಳಲ್ಲಿ ಡಿವೈಎಸ್ಪಿ, ತಾಲ್ಲೂಕು ದಂಡಾಧಿಕಾರಿ (ತಹಸಿಲ್ದಾರ್)ಗಳು ಅನುಮತಿ ನೀಡುವ ಪ್ರಾಧಿಕಾರಿಗಳಾಗಿರುತ್ತಾರೆ.