Home Interesting ಮೊಮ್ಮಗಳನ್ನು ನೋಡಲು ಬಂದ ಅತ್ತೆಗೆ ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿದ ಅಳಿಯ

ಮೊಮ್ಮಗಳನ್ನು ನೋಡಲು ಬಂದ ಅತ್ತೆಗೆ ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿದ ಅಳಿಯ

Hindu neighbor gifts plot of land

Hindu neighbour gifts land to Muslim journalist

ಕಾರವಾರ : ಮಗಳು ಜನ್ಮ ನೀಡಿದ್ದ ಮೊಮ್ಮಗಳನ್ನು ನೋಡಲು ಬಂದ ಅತ್ತೆಗೆ, ಅಳಿಯ ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿರೋ ಆಘಾತಕಾರಿ ಘಟನೆ ನಡೆದಿದೆ.

ಆರೋಪಿಯನ್ನು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ರಮಜಾನ್ ರಫೀಕ್ ಶೇಕ್ (23) ಎಂದು ಗುರುತಿಸಲಾಗಿದೆ.

ಆರೋಪಿ ರಮಜಾನ್ ರಫೀಕ್ ಶೇಕ್, ದೂರದ ಸಂಬಂಧಿಯಾದ ಕಾರವಾರ ಕದ್ರಾ ನಿವಾಸಿ ಫಾತಿಮಾ ಸಲಿಂ (37) ಎಂಬವರ ಮಗಳು ರಿಯಾನಾ ಸಲೀಂ (18) ಎಂಬಾಕೆಯನ್ನು ಪ್ರೀತಿಸಿ ಆಕೆಯನ್ನು ತನ್ನ ಮನೆಯಾದ ಹಳಿಯಾಳಕ್ಕೆ ಕರೆದುಕೊಂಡು ಹೋಗಿ ಕಳೆದ ನಾಲ್ಕು ವರ್ಷಗಳಿಂದ ಸಂಸಾರ ಪ್ರಾರಂಭಿಸಿದ್ದ. ಆದರೆ, ಆತ ಶಾಸ್ತ್ರೋಕ್ತವಾಗಿ ಮಾತ್ರ ಮದುವೆಯಾಗಿರಲಿಲ್ಲ.

ಇದೇ ವಿಚಾರವಾಗಿ ಯುವತಿ ರಿಯಾನಾಳ ತಾಯಿ ಹಾಗೂ ಆಕೆಯ ಗಂಡನ ನಡುವೆ ಕೊಂಚ ಮನಸ್ತಾಪ ಇತ್ತು. ಈ ಬಾರಿ ಆರೋಪಿಯ ಪತ್ನಿ ಹೆರಿಗೆಗಾಗಿ ಕಾರವಾರದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಹೆಣ್ಣು ಮಗುವಿಗೆ ಜನ್ಮ ಕೂಡಾ ನೀಡಿದ್ದಳು. ಹೀಗಾಗಿ, ಮಗಳು ಮಗುವಿಗೆ ಜನ್ಮ ನೀಡಿದ್ದಾಳೆಂಬ ಸುದ್ದಿ ಕೇಳಿ ಆಸ್ಪತ್ರೆಯ SICU ವಿಭಾಗಕ್ಕೆ ತನ್ನ ಮಕ್ಕಳು ಹಾಗೂ ಸಂಬಂಧಿಕರ ಜೊತೆ ತಾಯಿ ಫಾತಿಮಾ ಸಲೀಂ ಬಂದಿದ್ದಳು. ಮಗಳ ಸುಖ ದುಃಖವನ್ನು ಕೇಳಿಕೊಂಡ ಬಳಿಕ ಅಳಿಯನ‌ ಜತೆ ಮಾತಿಗಿಳಿದಿದ್ದಳು. ಈ ವೇಳೆ ಕೋಪಗೊಂಡ ಅಳಿಯ, ನನ್ನ ಮಗುವನ್ನು ನೋಡಲು ನೀವ್ಯಾಕೆ ಬಂದಿದ್ದೀರಿ? ಅಂತಾ ಮಾತು ಪ್ರಾರಂಭಿಸಿದ್ದ.

ಅತ್ತೆ ಫಾತಿಮಾ ತನ್ನ ಮಕ್ಕಳು ಹಾಗೂ ಸಂಬಂಧಿಕರ ಜತೆ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಅಳಿಯನ ಜತೆ ಮಾತನಾಡಿ, ತನ್ನ ಮಗಳನ್ನು ಇರಿಸಿಕೊಳ್ಳುವ ಬದಲು ಶಾಸ್ತ್ತೋಕ್ತವಾಗಿ ಮದುವೆಯಾಗು. ಇಲ್ಲಾಂದ್ರೆ ಸಮಾಜ ಏನನ್ನುತ್ತೆ? ಮಗಳನ್ನು ಮದುವೆಯಾಗಿಲ್ಲಂದ್ರೆ ವಾಪಾಸ್ ಕಳುಹಿಸು ಎಂದು ಹೇಳಿದ್ದರು. ಇದರಿಂದ ಮತ್ತಷ್ಟು ಕೋಪಗೊಂಡ ಅಳಿಯ, ತನ್ನ ಜತೆಯಲ್ಲಿ ಇರಿಸಿಕೊಂಡಿದ್ದ ಸಣ್ಣ ಚೂರಿಯಿಂದ ಅತ್ತೆಯ ಹೊಟ್ಟೆಗೆ ಇರಿದೇ ಬಿಟ್ಟಿದ್ದ.

ಚಾಕುವಿನೇಟು ತಿಂದ ಮಹಿಳೆ ಅಲ್ಲೇ ಕುಸಿದು ಬಿದ್ದಿದ್ದು, ಕೂಡಲೇ ಆಕೆಯನ್ನು ತುರ್ತು ಚಿಕಿತ್ಸಾ ಘಟಕಕ್ಕೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯಕ್ಕೆ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಇನ್ನು ಚೂರಿ ಇರಿತಕ್ಕೆ ಒಳಗಾದ ಮಹಿಳೆಯ ಮಕ್ಕಳು, ಸಂಬಂಧಿಕರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಆರೋಪಿ ರಮಜಾನ್ ರಫೀಕ್ ಶೇಖ್‌ನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಲ್ಲದೆ, ಪೊಲೀಸರ ವಶಕ್ಕೆ ನೀಡಿದ್ದಾರೆ.

ಮೊದಲೇ ನಶೆಯಲ್ಲಿದ್ದ ಆರೋಪಿಗೆ ಸರಿಯಾಗಿ ತದುಕಿದ ಬಳಿಕ ಆತ ಪ್ರಜ್ಞೆ ತಪ್ಪುವ ಹಂತಕ್ಕೆ ಹೋಗಿದ್ದ. ಹೀಗಾಗಿ, ಆರೋಪಿಯನ್ನು ಕೂಡಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.