ಅಬ್ಬಬ್ಬಾ ಏನ್ ಕಿಲಾಡಿ ಈ ಪೋರ !! | ತಾಯಿಯ ಫೋನ್ ನಲ್ಲಿ 31 ಬರ್ಗರ್ ಆರ್ಡರ್ ಮಾಡಿದ್ದಲ್ಲದೆ, ಡೆಲಿವರಿ ಬಾಯ್ ಗೆ ಟಿಪ್ಸ್ ಬೇರೆ ನೀಡಿದ 2 ವರ್ಷದ ಬಾಲಕ

Share the Article

ಇಂದಿನ ಮಕ್ಕಳಿಗೆ ಮೊಬೈಲ್ ಬಿಟ್ಟರೆ ಬೇರೆ ಜಗತ್ತೇ ಇಲ್ಲ. ಅಂಬೆಗಾಲಿಡುತ್ತಿರುವ ಮಕ್ಕಳು ಕೂಡ ಮೊಬೈಲ್ ಆಪರೇಟ್ ಮಾಡುವುದು ಹೇಗೆ ಎಂಬುದನ್ನು ಬೇಗನೆ ಕಲಿತುಕೊಳ್ಳುತ್ತಿದ್ದಾರೆ. ಮೊಬೈಲ್ ನಲ್ಲಿ ಗೇಮ್ ಆಡುವುದರಿಂದ ಹಿಡಿದು ಯೂಟ್ಯೂಬ್ ವೀಡಿಯೋ ನೋಡುವುದರವರೆಗೆ ಇಡೀ ದಿನ ಇದರಲ್ಲಿಯೇ ಕಳೆಯುತ್ತಾರೆ. ಆದರೆ, ಕೆಲವೊಮ್ಮೆ ಹೆತ್ತವರಿಗೆ ತಿಳಿಯದಂತೆ ಕೆಲವು ಆಘಾತಕಾರಿ ಕೆಲಸಗಳನ್ನು ಕೂಡಾ ಮಾಡುತ್ತಾರೆ. ಇದರಿಂದ ಎಷ್ಟೋ ಬಾರಿ ಅಪ್ಪ ಅಮ್ಮ ಪೇಚಿಗೆ ಸಿಲುಕಬೇಕಾಗುತ್ತದೆ. ಅಂತಹ ಘಟನೆಯೊಂದು ಇದೀಗ ಅಮೆರಿಕದಲ್ಲಿ ಬೆಳಕಿಗೆ ಬಂದಿದೆ.

ಅಮೇರಿಕಾದ ಟೆಕ್ಸಾಸ್‌ನಲ್ಲಿ 2 ವರ್ಷದ ಬಾಲಕನೊಬ್ಬ ತನ್ನ ತಾಯಿಯ ಸ್ಮಾರ್ಟ್‌ಫೋನ್ ಬಳಸಿ ಮೆಕ್‌ಡೊನಾಲ್ಡ್‌ನ ಔಟ್‌ಲೆಟ್‌ಗಳಿಂದ 31 ಚೀಸ್‌ಬರ್ಗರ್‌ಗಳನ್ನು ಆರ್ಡರ್ ಮಾಡಿದ್ದಾನೆ. ಡೆಲಿವರಿಗಾಗಿ 1,200 ರೂ. ಟಿಪ್ಸ್ ಕೂಡ ಕೊಟ್ಟಿದ್ದಾನೆ ಬೇರೆ. ಅಬ್ಬಬ್ಬಾ ಏನ್ ಕಿಲಾಡಿ 2 ವರ್ಷದ ಪೋರ ಅಲ್ವಾ !!

ಈ ವಿಷಯವನ್ನು ಆತನ ತಾಯಿಯೇ ಬಹಿರಂಗಪಡಿಸಿದ್ದಾರೆ. ಆತನ ತಾಯಿ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದು, ಅವರ ಮಗ ಫೋನ್ ನಲ್ಲಿರುವ ಬ್ಯಾರೆಟ್ ಡೋರ್‌ಡ್ಯಾಶ್ ಅಪ್ಲಿಕೇಶನ್ ಬಳಸಿ ಬರ್ಗರ್‌ಗಳನ್ನು ಆರ್ಡರ್ ಮಾಡಿರುವುದಾಗಿ ಬರೆದುಕೊಂಡಿದ್ದಾರೆ.

ಮಗ ಮೊಬೈಲ್ ಫೋನ್ ಹಿಡಿದು ಆಟವಾಡುತ್ತಿದ್ದು, ಈ ವೇಳೆ ಫೋಟೋ ತೆಗೆಯುತ್ತಿದ್ದಾನೆ ಎಂದು ಭಾವಿಸಿದ್ದಾಗಿ ತಾಯಿ ತನ್ನ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಮಗು ಆರ್ಡರ್ ಮಾಡಿದ 31 ಚೀಸ್ ಬರ್ಗರ್‌ಗಳ ಬೆಲೆ 61.58 ಡಾಲರ್ ಆಗಿದೆ. ಅಲ್ಲದೆ ಮಗು ಆರ್ಡರ್ ಡೆಲಿವರಿ ಮಾಡಿರುವವನಿಗೆ ಟಿಪ್ಸ್ ಕೂಡಾ ನೀಡಿದ್ದಾನೆ ಎಂದು ಹೇಳಿದ್ದಾರೆ.

Leave A Reply