ವಿಟ್ಲ : ಹಿಂದೂ ಯುವಕರ ಕೊಲೆಯತ್ನ,ಇಬ್ಬರ ಬಂಧನ

Share the Article

ವಿಟ್ಲ: ಕೇಪು ಗ್ರಾಮದ ಮೈರ ಎಂಬಲ್ಲಿ ನಡೆದ ಇಬ್ಬರು ಯುವಕರಿಗೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕು ಕೇಪು ಗ್ರಾಮದ ಕರವೀರ ಬಸ್ ನಿಲ್ದಾಣದ ಬಳಿ ಅಡ್ಯನಡ್ಕ ನಿವಾಸಿ ಗಿರೀಶ್ ಮತ್ತು ಮೈರ ನಿವಾಸಿ ರಕ್ಷಿತ್ ಕುಮಾರ್ ಎಂಬವರಿಗೆ ತಲವಾರ್ ನಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಸೋಮವಾರ ಪೇಟೆ ನಿವಾಸಿ ಕೆ.ಮಹಮ್ಮದ್ ಶರೀಫ್ (33), ವಿಟ್ಲದ ಉಕ್ಕುಡ ದರ್ಬೆ ನಿವಾಸಿ ಸಾದಿಕ್ (20) ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

Leave A Reply