ತಾಯಂದಿರ ದಿನ ಏಕೆ ಆಚರಿಸುತ್ತಾರೆ ಗೊತ್ತೆ? ಇಲ್ಲಿದೆ ನೋಡಿ
ಅಮ್ಮ ಎಂದರೆ ಬದುಕು ನೀಡಿದ ದೇವತೆ. ಕೈ ಹಿಡಿದು ಮುನ್ನಡೆಸಿದ ಮಹಾಮಾತೆ. ಪ್ರತಿಯೊಬ್ಬರ ಬಾಳಿನಲ್ಲೂ ಅಮ್ಮನಿಗೆ ವಿಶೇಷ ಸ್ಥಾನ ಇದೆ. ಪ್ರತಿಯೊಬ್ಬರ ಅಭಿವೃದ್ಧಿಯ ಹಿಂದೆ ಅಮ್ಮನ ಪಾತ್ರ ಬಹಳ ಹಿರಿದು. ಅಮ್ಮ ಎಂದರೆ ನಿಸ್ವಾರ್ಥ ಪ್ರೀತಿಯ ಸಂಕೇತ. ಮಕ್ಕಳ ಖುಷಿಯಲ್ಲಿಯೇ ತನ್ನ ಖುಷಿಯನ್ನು ಕಾಣುವವರು ಅಮ್ಮ. ಅಮ್ಮನ ಪ್ರೀತಿ ಎಂಥಾ ಸಮಸ್ಯೆಯನ್ನು ಎದುರಿಸುವ ಶಕ್ತಿ ಕೊಡುತ್ತದೆ.
ಇಂದು ತಾಯಂದಿರ ದಿನ ಏಕೆ ಆಚರಿಸುತ್ತಾರೆ ಗೊತ್ತೆ ಇಲ್ಲಿದೆ ನೋಡಿ
ಇದನ್ನು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸಲಾಗುತ್ತದೆ. ತಾಯಂದಿರ ದಿನವನ್ನು 1908ರಲ್ಲಿ ಅಮೆರಿಕದಲ್ಲಿ ಆಚರಿಸಲು ಶುರು ಮಾಡಲಾಯಿತು. ಅಮೆರಿಕದ ಶಾಂತಿ ಕಾರ್ಯಕರ್ತೆ ಆಗಿದ್ದ ಅನಾ ಜಾರ್ವಿಸ್ ತನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಅನಾ ಜಾರ್ವಿಸ್ ಮದುವೆ ಆಗಿರಲಿಲ್ಲ. 1905ರಲ್ಲಿ ಅನಾ ತಾಯಿ ಮರಣ ಹೊಂದಿದ್ದರು. ತನ್ನ ತಾಯಿಯ ಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸಲು ಅನಾ ಈ ದಿನ ಆಯ್ಕೆ ಮಾಡಿಕೊಂಡಿದ್ದರು. ಅವರು ಈ ದಿನವನ್ನು ತಾಯಂದಿರ ದಿನವಾಗಿ ಆಚರಿಸಲು ಶುರು ಮಾಡಿದ್ದರು. ಬಳಿಕ ಅಮೆರಿಕದ ರಾಷ್ಟ್ರಪತಿ ಆಗಿದ್ದ ವುಡ್ರೋ ವಿಲ್ಸನ್ ಮೇ 9, 1914ರಂದು ಪ್ರತಿ ವರ್ಷ ಮೇ 2ನೇ ಭಾನುವಾರದಂದು ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ ಎಂದು ಕಾನೂನನ್ನು ಜಾರಿಗೊಳಿಸಿದರು. ಈ ಕಾನೂನು ಜಾರಿ ಮಾಡಿದ ನಂತರ ಅಮೆರಿಕ, ಭಾರತ ಹಾಗೂ ಹಲವು ದೇಶಗಳಲ್ಲಿ ಮೇ ತಿಂಗಳ 2ನೇ ಭಾನುವಾರದಂದು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ.
1900ರ ದಶಕದ ಆರಂಭದಲ್ಲಿ ಯುಎಸ್ ನ ಅನ್ನಾ ಜಾರ್ವಿಸ್ ಎಂಬ ಮಹಿಳೆ ಪ್ರಪಂಚದಾದ್ಯಂತದ ತಾಯಂದಿರಿಗಾಗಿ ಒಂದು ದಿನವನ್ನು ಅರ್ಪಿಸಲು ಪ್ರಯತ್ನಿಸುತ್ತಾಳೆ. 1905 ರಲ್ಲಿಆಕೆ ಅವಳ ತಾಯಿಯನ್ನು ಕಳೆದುಕೊಳ್ಳುತ್ತಾಳೆ. ತದನಂತರ 1908 ರಲ್ಲಿ, ಪಶ್ಚಿಮ ವರ್ಜೀನಿಯಾದ ಗ್ರಾಫ್ಟನ್‌ನಲ್ಲಿರುವ ಸೇಂಟ್ ಆಂಡ್ರ್ಯೂಸ್ ಮೆಥೋಡಿಸ್ಟ್ ಚರ್ಚ್‌ನಲ್ಲಿ ತನ್ನ ತಾಯಿಗಾಗಿ ಪ್ರಾರ್ಥನಾ ಸಭೆಯನ್ನು ಆಯೋಜಿಸಿದ್ದಳು. ತಾಯಿಯ ದಿನವನ್ನು ಆಚರಿಸಲು ಅನ್ನಾ ಒಂದು ದಿನವನ್ನು ಮೀಸಲಿಡಬೇಕೆಂದು ನಿರ್ಧರಿಸಿ ಮನವಿಯನ್ನು ಮಾಡಿದಳು. ಅದೇ ವರ್ಷದಲ್ಲಿ ಅಮೆರಿಕದ ಅಧಿಕಾರಿಗಳು ಅದನ್ನು ತಿರಸ್ಕರಿಸಿದರು. ಆದರೆ ನಂತರ ವಿಶ್ವದಾದ್ಯಂತದ ತಾಯಂದಿರಿಗೆ ಕೃತಜ್ಞತೆ ಸಲ್ಲಿಸುವ ಪ್ರಸ್ತಾಪವನ್ನು 1911 ರಲ್ಲಿ ಅಂಗೀಕರಿಸಲಾಯಿತು.
ನಿಮ್ಮ ತಾಯಿಯ ಕಣ್ಣುಗಳನ್ನು ನೋಡಿದಾಗ ನೀವು ತಿಳಿಯುತ್ತೀರಿ, ಇದುವೇ ಜಗತ್ತಿನ ಅತಿ ಪವಿತ್ರವಾದ ಪ್ರೀತಿಯೆಂದು -ಮಿಚ್ ಅಲ್‌ಬೋಮ್