Home Interesting ಇನ್ನೇನು ತಾಯಿ ಹಸೆಮಣೆ ಏರಬೇಕು ಅಷ್ಟರಲ್ಲಿ ಹಾಲುಗಲ್ಲದ ಆಕೆಯ ಕಂದ ” ಅಮ್ಮಾ” ಎನ್ನುತ್ತಾ ಓಡೋಡಿ...

ಇನ್ನೇನು ತಾಯಿ ಹಸೆಮಣೆ ಏರಬೇಕು ಅಷ್ಟರಲ್ಲಿ ಹಾಲುಗಲ್ಲದ ಆಕೆಯ ಕಂದ ” ಅಮ್ಮಾ” ಎನ್ನುತ್ತಾ ಓಡೋಡಿ ಬಂದ !

Hindu neighbor gifts plot of land

Hindu neighbour gifts land to Muslim journalist

ಆಕೆ ಮದುವೆ ಸಂಭ್ರಮದಲ್ಲಿದ್ದಳು. ಆಕೆಯನ್ನು ಇನ್ನೇನು ಮದುವೆಯಾಗಬೇಕಿತ್ತು. ತನ್ನ ತಂದೆ ಜೊತೆ ಮದುವೆ ಮಂಟಪಕ್ಕೆ ಇನ್ನೇನು ಬರೇಕು ಅನ್ನುವಷ್ಟರಲ್ಲಿ ಆಕೆಯ ಹಾಲುಗಲ್ಲದ ಕಂದ ಅಮ್ಮನನ್ನು ನೋಡಿ ದಂಗಾಗಿಬಿಟ್ಟ. ಏಕೆಂದರೆ ಆಕೆ ಮದುವಣಗಿತ್ತಿ ಡ್ರೆಸ್ ನಲ್ಲಿ ತುಂಬಾನೇ ಚಂದ ಕಾಣಿಸುತ್ತಿದ್ದಳು. ಮಗು “ಹೇ ಮಾಮ್(ಅಮ್ಮಾ)” ಎಂದು ಕೂಗುತ್ತಾ ಓಡೋಡಿ ಬಂದು ಆಕೆಯ ಮಡಿಲು ಸೇರುತ್ತದೆ.

ಮದುವಣಗಿತ್ತಿ ತನ್ನ ಮಗುವನ್ನು ಆಲಿಂಗನ ಮಾಡುವ ಆ ತಾಯಿ ಮಗುವಿನ ಪ್ರೀತಿಯ ಚಿಲುಮೆ ಉಕ್ಕುತ್ತದೆ. ಈ ಹೃದಯ ಕರಗುವ ದೃಶ್ಯಕ್ಕೆ ಅಲ್ಲಿಯ ಜನ ಸಾಕ್ಷಿಯಾಗುತ್ತಾರೆ.

https://www.instagram.com/reel/Cc_0oWdD8nV/?utm_source=ig_web_copy_link

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದ್ದು, 30 ಸಾವಿರಕ್ಕೂ ಅಧಿಕ ವೀಕ್ಷಣೆಯಾಗಿದೆ ಮತ್ತು 2600 ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

ಇನ್ನೂ ಸಾವಿರಾರು ಮಂದಿ ನೆಟ್ಟಿಗರು ಈ ಅಂತಃಕರಣದ ವಿಡಿಯೋವನ್ನು ಹತ್ತಾರು ಬಾರಿ ವೀಕ್ಷಿಸಿದ್ದು, ತಾಯಿ ಮಗುವಿನ ಪ್ರೀತಿಯನ್ನು ಕಂಡಾಗ ನೆಟ್ಟಿಗರಿಗೆ ಅರಿವಿಲ್ಲದೇ ಅವರ ಕಣ್ಣಾಲಿಗಳು ತೇವಗೊಳ್ಳುವಂತೆ ಮಾಡಿದೆ.