‘ಮೂತ್ರ’ ಸೇವನೆಯಿಂದ ಈ ವ್ಯಕ್ತಿಯ ಆರೋಗ್ಯ ಸುಧಾರಣೆ | ಇಷ್ಟು ಮಾತ್ರವಲ್ಲದೇ, ವಯಸ್ಸಿನಲ್ಲಿ ಚಿಕ್ಕವನಂತೆ ಕಾಣಲು ಸಹಕಾರಿಯಂತೆ ಈ ‘ ಸ್ವಮೂತ್ರ’
ಎಲ್ಲರೂ ಆರೋಗ್ಯಕ್ಕಾಗಿ ಉತ್ತಮ ಜೀವನ ಶೈಲಿಯನ್ನು ಅನುಸರಿಸುತ್ತಾರೆ. ಆದರೆ, ಯಾರಾದರೂ ತನ್ನದೇ ಸ್ವಮೂತ್ರವನ್ನು ಕುಡಿದು ಆರೋಗ್ಯ ಕಾಪಾಡುವ ತಂತ್ರ ಹುಡುಕಿದ್ದಾನೆ. ಎಲ್ಲಾ ಆರೋಗ್ಯ ಪಾನೀಯಗಳು, ಔಷಧಿಗಳನ್ನು ಬದಿಗಿಟ್ಟು ತನ್ನದೇ ಮೂತ್ರವನ್ನು ಕುಡಿಯುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಇಂಗ್ಲೆಂಡ್‌ನ 34 ವರ್ಷದ ಹ್ಯಾರಿ ಮಟಾಡೀನ್ ಎಂಬ ವ್ಯಕ್ತಿ ಆರೋಗ್ಯ ಪ್ರಯೋಜನಗಳಿಗಾಗಿ ತನ್ನದೇ ಮೂತ್ರವನ್ನು ಕುಡಿಯುತ್ತಾರಂತೆ. ಮೂತ್ರ ಥೆರಪಿ ಮಾಡುತ್ತಿದ್ದಾನಂತೆ. ಪ್ರತಿದಿನ 200 ಮಿಲಿ ತನ್ನ ಮೂತ್ರವನ್ನು ಕುಡಿಯುವ ಈ ವ್ಯಕ್ತಿ 2016 ರಿಂದ ಈ ವಿಲಕ್ಷಣ ಚಿಕಿತ್ಸೆಯನ್ನು ಪ್ರಾರಂಭಿಸಿದ್ದಾನೆ. ಇದು ಅವನ ಮಾನಸಿಕ ಆರೋಗ್ಯ ಮತ್ತು ನೋಟವನ್ನು ಸುಧಾರಿಸುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಸಾಬೀತಾಗಿದೆಯಂತೆ.
ಹ್ಯಾರಿ ಖಿನ್ನತೆ ಮತ್ತು ತೀವ್ರ ಸಾಮಾಜಿಕ ಆತಂಕದಿಂದ ಬಳಲುತ್ತಿದ್ದು ನಂತರ ಮೂತ್ರ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಪ್ರೇರೇಪಿಸಿತು. ಸ್ವಯಂ-ಚಿಕಿತ್ಸೆಯನ್ನು ಪ್ರಾರಂಭಿಸಿದ ನಂತರ, ಖಿನ್ನತೆಯನ್ನು ದೂರ ಮಾಡಿದೆಯಂತೆ. ಅಷ್ಟೇ ಅಲ್ಲದೇ, ನಾನು ವಯಸ್ಸಿನಲ್ಲಿ ಚಿಕ್ಕವನಂತೆ ಕಾಣುತ್ತೇನೆ. ಇದು ವಯಸ್ಸಾದ ಚರ್ಮವನ್ನು ಮೃದುಗೊಳಿಸುತ್ತದೆ ಎಂದು ಎಂದು ಹ್ಯಾರಿ ಹೇಳುತ್ತಾನೆ.
‘ಮೂತ್ರವನ್ನು ಕುಡಿದ ಕ್ಷಣದಿಂದ, ಅದು ನನ್ನ ಮೆದುಳನ್ನು ಎಚ್ಚರಗೊಳಿಸಿತ್ತದೆ ಮತ್ತು ನನ್ನ ಖಿನ್ನತೆಯನ್ನು ತೆಗೆದುಹಾಕಿತು. ನಾನು ಈಗ ಶಾಂತವಾಗಿದ್ದೇನೆ. ಇದು ನನ್ನನ್ನು ಯಾವಾಗಲೂ ಸಂತೋಷದ ಸ್ಥಿತಿಯಲ್ಲಿ ಇರಿಸುತ್ತದೆ’ ಎಂಬುದಾಗಿ ಹ್ಯಾರಿ ಹೇಳುತ್ತಾನೆ.
ಮೂತ್ರವು ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು ಹ್ಯಾರಿಗೆ ಸಹಾಯ ಮಾಡಿರಬಹುದು. ಆದರೆ ಎಲ್ಲರಿಗೂ? ಇದಕ್ಕೆ ತಜ್ಞರೇ ಉತ್ತರ ನೀಡಬೇಕು.