ಕೊರೋನ ವೈರಸ್ ಆತಂಕದ ನಡುವೆ ಮಕ್ಕಳಲ್ಲಿ ಕಾಣಿಸುತ್ತಿದೆ ನಿಗೂಢ ಕಾಯಿಲೆ!

ಕೊರೋನ ವೈರಸ್ ಸೋಂಕಿನಿಂದ ಭಯಭೀತರಾಗಿರುವ ಜನರಿಗೆ ಮತ್ತೊಂದು ಆತಂಕ ಎದುರಾಗಿದೆ. ಇದೀಗ ಜೂನ್ ನಲ್ಲಿ ಸೋಂಕಿನ ಸಂಖ್ಯೆ ಅಧಿಕವಾಗಲಿದ್ದು, ಮಕ್ಕಳಿಗೆ ಅಪಾಯ ಹೆಚ್ಚಿದೆ ಎಂದು ತಜ್ಞರು ತಿಳಿಸುತ್ತಿದ್ದಂತೆ ಇತ್ತ ಕಡೆಯಿಂದ ಇನ್ನೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಹೌದು.ಮಕ್ಕಳಲ್ಲಿ ನಿಗೂಢ ಕಾಯಿಲೆಯ ಭಯ ಹುಟ್ಟಿದೆ.ಹೆಪಟೈಟಿಸ್ ಪ್ರಕರಣಗಳು ಮಕ್ಕಳಲ್ಲಿ ಹಠಾತ್ ಆಗಿ ಹೆಚ್ಚಳವಾಗಿರುವುದು ಕಂಡು ಬಂದಿದ್ದು, ಈ ಬಗ್ಗೆ ಪೋಷಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಪ್ರಪಂಚದಾದ್ಯಂತ ತಜ್ಞರು ರೋಗದ ಕಾರಣವನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಿದ್ದು,ಮಕ್ಕಳಲ್ಲಿ ಇಲ್ಲಿಯವರೆಗೆ ಹೆಪಟೈಟಿಸ್‌ನ ಒಟ್ಟು 169 ಪ್ರಕರಣಗಳು ವರದಿ ಆಗಿದೆ.ಒಂದು ವರದಿಯ ಪ್ರಕಾರ, ಹೆಪಟೈಟಿಸ್ ಕಾಯಿಲೆಯಿಂದ ಮಗುವೂ ಸಾವನ್ನಪ್ಪಿರುವ ವರದಿ ಇದ್ದು,ಈ ಸಾವು ಯಾವ ದೇಶದಲ್ಲಿ ನಡೆದಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ವರದಿ ಆಗಿರುವ ಹೆಪಟೈಟಿಸ್‌ನ ಒಟ್ಟು 169 ಪ್ರಕರಣಗಳಲ್ಲಿ ಯುಕೆ (114) ಅತಿ ಹೆಚ್ಚು ಕೇಸ್ ಗಳನ್ನು ಹೊಂದಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದೆ.ಅಪಾಯವು 1 ರಿಂದ 5 ವರ್ಷ ವಯಸ್ಸಿನ ಮಕ್ಕಳಲ್ಲಿ ಹೆಚ್ಚು ಗಮನಾರ್ಹವಾಗಿದೆ. ಈ ಮಕ್ಕಳಲ್ಲಿ ಸುಮಾರು 16 ಪ್ರತಿಶತದಷ್ಟು ಮಕ್ಕಳು ಕೋವಿಡ್ -19 ಗೆ ಬಲಿಯಾಗಿದ್ದಾರೆ. ಆದ್ದರಿಂದ, ಸಮುದಾಯದಲ್ಲಿ ಹೆಚ್ಚಿನ ಮಟ್ಟದ ಸೋಂಕು ಕೂಡ ಇದಕ್ಕೆ ಕಾರಣವಾಗಬಹುದು.

ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿಯ (ಯುಕೆಎಚ್‌ಎಸ್‌ಎ) ಅಧಿಕಾರಿಗಳು ಹೇಳುವ ಪ್ರಕಾರ, ರೋಗದ ಮಾದರಿಯು ಅಡೆನೊವೈರಸ್ ಸೋಂಕು ಹೆಪಟೈಟಿಸ್‌ ರೋಗದ ಪ್ರಕರಣಗಳ ಹೆಚ್ಚಳದ ಹಿಂದಿನ ಮುಖ್ಯ ಕಾರಣ ಎಂದಿದೆ. ವರದಿಯ ಪ್ರಕಾರ, ವರ್ಷದ ಆರಂಭದಲ್ಲಿ ಹೆಪಟೈಟಿಸ್ ಪರೀಕ್ಷೆಗೆ ಒಳಗಾದ ಸುಮಾರು 75 ಪ್ರತಿಶತ ಮಕ್ಕಳಲ್ಲಿ ಇದು ದೃಢಪಟ್ಟಿದೆ.

ಹೆಪಟೈಟಿಸ್‌ನ ಲಕ್ಷಣಗಳು:
*ಮೂತ್ರದಲ್ಲಿ ಹಳದಿ ಅಥವಾ ಬೂದು ಬಣ್ಣದ ಮಲ
*ಚರ್ಮದಲ್ಲಿ ತುರಿಕೆ
*ಕಣ್ಣು ಅಥವಾ ಚರ್ಮ ಹಳದಿಯಾಗುವುದು
*ಸ್ನಾಯುಗಳ ಕೀಲು ನೋವು
*ತೀವ್ರ ಜ್ವರ
*ಅನಾರೋಗ್ಯದ ಭಾವನೆ
*ವಿಪರೀತ ಆಯಾಸ
*ಹಸಿವು ಆಗದಿರುವುದು
*ಹೊಟ್ಟೆ ನೋವು

ತಜ್ಞರ ಪ್ರಕಾರ, ‘ರೋಗವನ್ನು ಗಂಭೀರವಾಗಿ ಪರಿಗಣಿಸಬೇಕು. ಕೈ ತೊಳೆಯುವುದು ಮತ್ತು ಉಸಿರಾಟದ ನೈರ್ಮಲ್ಯದಂತಹ ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸುವ ಅಗತ್ಯವಿದೆ. ಇದು ಅಡೆನೊವೈರಸ್ ಸೇರಿದಂತೆ ಅನೇಕ ರೀತಿಯ ಸಾಮಾನ್ಯ ಸೋಂಕುಗಳನ್ನು ಹರಡುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದ್ದಾರೆ.ವಾಂತಿ ಅಥವಾ ಭೇದಿಯಂತಹ ಜಠರಗರುಳಿನ ಸೋಂಕಿನ ಲಕ್ಷಣಗಳನ್ನು ತೋರಿಸುವ ಮಕ್ಕಳನ್ನು ಶಾಲೆಗೆ ಕಳುಹಿಸುವ ಬದಲು ಮನೆಯಲ್ಲಿಯೇ ಇರಿಸುವುದು ಸೂಕ್ತವಾದ ಸಲಹೆ. ದೇಹದಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದು ನಿಂತಾದ ಮೇಲೆ 48 ಗಂಟೆಗಳ ಕಾಲ ಗಮನ ಹರಿಸುವುದು ಸೂಕ್ತ ಎಂದಿದೆ.

ಈ ದೇಶಗಳಲ್ಲಿ ಹೆಪಟೈಟಿಸ್ ರೋಗದ ಹೆಚ್ಚುತ್ತಿರುವ ಪ್ರಕರಣಗಳು ಬ್ರಿಟನ್‌ನಲ್ಲಿ ಸುಮಾರು 114 ಪ್ರಕರಣಗಳು ಕಂಡು ಬಂದಿವೆ. ಸ್ಪೇನ್ ನಲ್ಲಿ (13), ಇಸ್ರೇಲ್ (12), ಅಮೆರಿಕ (9), ಡೆನ್ಮಾರ್ಕ್ (6), ಐರ್ಲೆಂಡ್ (ಸುಮಾರು 5), ನೆದರ್ಲ್ಯಾಂಡ್ಸ್ (4), ಫ್ರಾನ್ಸ್ (2), ನಾರ್ವೆ (2), ರೊಮೇನಿಯಾ (2) ಮತ್ತು ಬೆಲ್ಜಿಯಂ (ಸುಮಾರು 5 ಪ್ರತಿಶತ) 1) ಪಟ್ಟಿಯಲ್ಲಿ ಹೆಸರು ಇದೆ.

Leave A Reply

Your email address will not be published.