ತುರ್ತು ಚಿಕಿತ್ಸಾ ವಿಭಾಗದಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಸಿಪಿಆರ್ |ಚಿಕಿತ್ಸೆ ನೀಡಿದರೂ ವಿದ್ಯುತ್ ವ್ಯತ್ಯಯದಿಂದಾಗಿ ಮಹಿಳೆ ಸಾವು!!
ಮಹಿಳೆಯೋರ್ವರು ಚಿಕಿತ್ಸೆ ಪಡೆಯುತ್ತಿದ್ದ ವೇಳೆ ವಿದ್ಯುತ್ ಕೈಕೊಟ್ಟು,ಗಂಭೀರ ಸ್ಥಿತಿಯಲ್ಲಿದ್ದವರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಕೋಟಾ ನಗರದ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ವರದಿಗಳ ಪ್ರಕಾರ, ಕೋಟಾದ ನ್ಯೂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು,ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು. ಆದರೆ ವಿದ್ಯುತ್ ಕಡಿತದ ನಂತರ ಆಕೆಯ ಸ್ಥಿತಿ ಹದಗೆಡಲು ಪ್ರಾರಂಭಿಸಿತು.ವಿದ್ಯುತ್ ವ್ಯತ್ಯಯದಿಂದಾಗಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಕತ್ತಲಲ್ಲಿಯೇ ಚಿಕಿತ್ಸೆ ನಡೆಸಲಾಯಿತು.
ವೈದ್ಯರು ರೋಗಿಯ ಮೇಲೆ ಸಿಪಿಆರ್ ಮಾಡಿದರೂ,ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಆಸ್ಪತ್ರೆ ಆಡಳಿತದ ನಿರ್ಲಕ್ಷ್ಯದಿಂದ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ವಿದ್ಯುತ್ ಸ್ಥಗಿತದಿಂದಾಗಿ, ಹಲವಾರು ರೋಗಿಗಳ ಸ್ಥಿತಿ ಹದಗೆಟ್ಟಿತು ಮತ್ತು ಅನೇಕರು ಗಂಭೀರರಾಗಿದ್ದಾರೆ ಎಂದು ವರದಿಯ ಪ್ರಕಾರ ತಿಳಿದು ಬಂದಿದೆ.