13 ವಾರದ ಕಂದನ ಪ್ರಾಣ ಕಾಪಾಡಿದ ಗೋಮಾತೆ | ಮಗುವಿನ ಹೃದಯ ಸಮಸ್ಯೆಗೆ ಹಸುವಿನ ಅಂಗಾಂಶ!

ದೇವರ ದಯೆ ಒಂದಿದ್ದರೆ ಸಾವನ್ನು ಗೆದ್ದು ಬರಬಹುದು ಎಂಬುದಕ್ಕೆ ಈ ಪುಟ್ಟ ಮಗುವಿನ ವಿಚಾರದಲ್ಲಿ ನಿಜವಾಗಿದೆ‌. ಹುಟ್ಟಿನಿಂದಲೇ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ 13 ವಾರಗಳ ಹೆಣ್ಣು ಮಗುವಿನ ಪ್ರಾಣವನ್ನು ದೇವರು ಗೋಮಾತೆ ರೂಪದಲ್ಲಿ ದೇವತೆಯಾಗಿ ಕಳುಹಿಸಿ ಅದರ ಜೀವ ಕಾಪಾಡಿದ್ದಾರೆ.

ಈ ಪವಾಡದ ಘಟನೆ ನಡೆದಿರುವುದು ಆಗ್ನೇಯ ಲಂಡನ್‌ನ ಸಿಡ್‌ಕಪ್ ಪಟ್ಟಣದಲ್ಲಿ. 13 ವಾರಗಳ ಬಾಲಕಿಯ ಜೀವವನ್ನು ಉಳಿಸಲು ನಡೆಸಿದ ಓಪನ್ ಹಾರ್ಟ್ ಸರ್ಜರಿಯಲ್ಲಿ ಹಸುವಿನ ಅಂಗಾಂಶವನ್ನು ಬಳಸಿ ಬಾಲಕಿಯ ಶಸ್ತ್ರಚಿಕಿತ್ಸೆ ಮಾಡಿದ್ದು, ಈ ಪುಟ್ಟ ಕಂದ ಈಗ ಸಂಪೂರ್ಣ ಆರೋಗ್ಯವಾಗಿದೆ.

ಪ್ರಪಂಚದಾದ್ಯಂತ ಲಕ್ಷಾಂತರ ಮಕ್ಕಳು ಹುಟ್ಟುತ್ತಲೇ ಹೃದಯ ಕಾಯಿಲೆಯಿಂದ ಬಳಲುತ್ತಿರುತ್ತಾರೆ. ಈ 13 ವಾರಗಳ ಬಾಲಕಿಯೂ ಹೀಗೇ ಆಗಿದೆ, ಆಕೆಯ ದೇಹವು ಹೃದಯದಿಂದ ದೇಹದ ಇತರ ಭಾಗಗಳಿಗೆ ರಕ್ತವನ್ನು ಸಾಗಿಸುವ ಟ್ಯೂಬ್‌ನಲ್ಲಿ ಸೋರಿಕೆಯಾಗಲು ಪ್ರಾರಂಭಿಸಿತು. ಅಷ್ಟೇ ಅಲ್ಲ, ಬಾಲಕಿಯ ಸ್ಥಿತಿ ಹದಗೆಟ್ಟಿದ್ದರಿಂದ ಉಸಿರಾಟಕ್ಕೆ ತೊಂದರೆಯಾಗಿ ಹಾಲು ಕುಡಿಯುವುದನ್ನೂ ನಿಲ್ಲಿಸಿತ್ತು. ಮಗುವಿನ ಪೋಷಕರು ವೈದ್ಯರಿಗೆ ತೋರಿಸಿದಾಗ, ಈ ಬಾಲಕಿಗೆ ಮಿಟ್ರಲ್ ವಾಲ್ಸ್ ಕಾಯಿಲೆ ಮಿಶ್ರಿತವಾಗಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಮಗು ಸಾವನ್ನಪ್ಪುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ವಾಸ್ತವವಾಗಿ, ಮಿಶ್ರ ಮಿಟ್ರಲ್ ಕವಾಟ ಎಂದು ಕರೆಯಲ್ಪಡುವ ಈ ಕಾಯಿಲೆಯಲ್ಲಿ ಮಿಟ್ರಲ್ ಕವಾಟವು ಶ್ವಾಸಕೋಶದ ಮೂಲಕ ಆಮ್ಲಜನಕ-ಭರಿತ ರಕ್ತವನ್ನು ಇಡೀ ದೇಹಕ್ಕೆ ಸಾಗಿಸುವ ಒಂದು ಫ್ಲಾಪ್ ಹಾಗೂ ಮತ್ತು ಅದರಲ್ಲಿ ಏನೇ ಸಮಸ್ಯೆ ಬರಲು ಪ್ರಾರಂಭಿಸಿದರೆ, ನಂತರ ದೇಹದ ಉಳಿದ ಭಾಗಗಳು ಸಹ ಹಾನಿಗೊಳಗಾಗಬಹುದು. ಇದನ್ನು ಸರಿಪಡಿಸಲು, ಸಾಮಾನ್ಯವಾಗಿ ಹಿರಿಯರಿಗೆ ಓಪನ್ ಹಾರ್ಟ್ ಸರ್ಜರಿ ಮಾಡಲಾಗುತ್ತದೆ, ಆದರೆ ಈ ಮಗು ತುಂಬಾ ಚಿಕ್ಕದಾಗಿರುವುದರಿಂದ ವೈದ್ಯರಿಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲು ತುಂಬಾ ಕಷ್ಟಕರವಾಗಿತ್ತು.

ಪುಟ್ಟ ಕಂದನ ಹೃದಯವು ಅಡಿಕೆಯಷ್ಟು ಚಿಕ್ಕದಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಪುಟ್ಟ ಹೃದಯದಲ್ಲಿ ಹಸುವಿನ ಅಂಗಾಂಶವನ್ನು ಹಾಕಲು, ವೈದ್ಯರು ಮೊದಲು ಕಂದನ ಹೃದಯದಿಂದ ಹಾನಿಗೊಳಗಾದ ಕವಾಟವನ್ನು ತೆಗೆದುಹಾಕಿ, ನಂತರ ಹಸುವಿನ ಅಂಗಾಂಶದಿಂದ ಮಾಡಿದ ಹೊಸ ಕವಾಟವನ್ನು ಬಲೂನ್ ತರಹದ ವಸ್ತುವನ್ನು ಬಳಸಿ, ಹೊಸ ವಾಲ್ಟ್ ಅನ್ನು ಸ್ಥಾಪಿಸಿದ ಕೂಡಲೇ, ಬಲೂನ್ ಅನ್ನು ತೆಗೆದುಹಾಕಲಾಯಿತು. ಈ ಪ್ರಕ್ರಿಯೆಯು ಸುಮಾರು 6 ಗಂಟೆಗಳ ಕಾಲ ನಡೆಯಿತು. ಇದರ ನಂತರ, ಕಂದನ ದೇಹದ ಉಳಿದ ಭಾಗಗಳಲ್ಲಿ ರಕ್ತ ಪರಿಚಲನೆ ಪ್ರಾರಂಭವಾಗಿ ನಂತರ ಆಮ್ಲಜನಕದ ಪೂರೈಕೆಯೂ ಪ್ರಾರಂಭವಾಯಿತು. ಶಸ್ತ್ರಚಿಕಿತ್ಸೆಯ ನಡೆದ 8 ದಿನಗಳ ನಂತರ ಬಾಲಕಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾಳೆ ಮತ್ತು ಈಗ ಅದು ಡಿಸ್ಟಾರ್ಜ್ ಆಗಿ ತನ್ನ ಮನೆ ಸೇರಿದೆ.

Leave A Reply

Your email address will not be published.