ಮನೆಯವರ ಒತ್ತಾಯಕ್ಕೆ ಪ್ರೇಯಸಿಯನ್ನು ಬಿಟ್ಟು ಇನ್ನೊಬ್ಬಳ ಜೊತೆ ಸಪ್ತಪದಿ ತುಳಿದ ಪ್ರಿಯಕರ| ಮನನೊಂದು ಪ್ರೇಮಿಗಳಿಬ್ಬರು ಒಂದೇ ಸೀರೆಯ ಎರಡು ತುದಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ

Share the Article

ಪ್ರೀತಿಗೆ ಸಾವಿಲ್ಲ ಎನ್ನುತ್ತಾರೆ. ಆದರೆ ಇಲ್ಲೊಂದು ಕಡೆ ಪ್ರೀತಿಯೇ ಉಳಿಯಲಿಲ್ಲ, ಇನ್ನೂ ನಾವೇಕೆ ಎಂದು ನೊಂದುಕೊಂಡು ಒಂದೇ ಸೀರೆಗೆ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಆರ್.ಎಚ್. ಕ್ಯಾಂಪ್ – 3ರಲ್ಲಿ‌ ಇಂದು ನಡೆದಿದೆ.

ಆತ್ಮಹತ್ಯೆಗೆ ಶರಣಾದವರನ್ನು ಲವ ಸರ್ಕಾರ್( 24) ಮತ್ತು ಕರೀನಾ(19) ಎಂದು ಗುರುತಿಸಲಾಗಿದೆ.

ಲವ ಸರ್ಕಾರ್ ಹಾಗೂ ಕರೀನಾ ಒಬ್ಬರನೊಬ್ಬರು ಮನಸೋಇಚ್ಛೆ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರಿಂದ , ಇವರಿಬ್ಬರಿಗೂ ಒಟ್ಟಾಗಿ ಜೀವನ ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ ಲವ, ಮನೆಯವರ ಒತ್ತಾಯಕ್ಕಾಗಿ ಬೇರೊಂದು ಹುಡುಗಿಯ ಜೊತೆ ಮದುವೆಯಾಗಬೇಕಾಗಿ ಬಂತು. ಇದರಿಂದ ಕರೀನಾ ಬೇಸರಗೊಂಡಿದ್ದಳು. ಇತ್ತ ಲವ ಮದುವೆಯಾದ ಹುಡುಗಿಯ ಜೊತೆ ಸುಖ ಸಂಸಾರ ನಡೆಸಲು ಆಗದೆ, ಪ್ರೇಯಸಿ ನೆನಪಲ್ಲಿ ಕೊರಗಿದ್ದಾನೆ.

ಇದರಿಂದ ನಿರ್ಧಾರಕ್ಕೆ ಬಂದ ಈ ಪ್ರೇಮಿಗಳಿಬ್ಬರೂ,ಜಮೀನಿನಲ್ಲಿರುವ ಮರವೊಂದಕ್ಕೆ ಸೀರೆಯನ್ನು ಕಟ್ಟಿ, ಒಂದೇ ಸೀರೆಯ ಎರಡು ತುದಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Leave A Reply