ವಿಟ್ಲ: ಮನೆಯ ಜಗಲಿಯಲ್ಲಿಟ್ಟಿದ್ದ ಅಡಿಕೆ ಚೀಲ ಎತ್ತಾಕೊಂಡು ಹೋದ ಕಳ್ಳ !! | ಕಳ್ಳನ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

Share the Article

ಕಳ್ಳನೊಬ್ಬ ಮನೆಯೊಂದರಿಂದ ಅಡಿಕೆ ಕಳವುಗೈದು ಪರಾರಿಯಾದ ಘಟನೆ ವಿಟ್ಲದಲ್ಲಿ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಾಡಹಗಲೇ ಅಪರಿಚಿತ ವ್ಯಕ್ತಿಯೊಬ್ಬ ದ್ವಿಚಕ್ರದಲ್ಲಿ ಬಂದು ಮನೆಯ ಜಗಲಿಯಲ್ಲಿ ಮಾರಾಟಕ್ಕೆಂದು ಇಟ್ಟಿದ್ದ ಅಡಿಕೆ ಚೀಲವನ್ನು ಎಗರಿಸಿ ಪರಾರಿಯಾಗುತ್ತಾನೆ. ಕಳ್ಳನ ಈ ಕೈಚಳಕದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಂತಹ ಘಟನೆಗಳು ಕರಾವಳಿಯಲ್ಲಿ ಮರುಕಳಿಸುತ್ತಿರುವುದರಿಂದ ಅಡಿಕೆ ಬೆಳೆಗಾರರು ತುಂಬಾನೇ ಜಾಗರೂಕರಾಗಿರುವುದು ಅವಶ್ಯಕ.

Leave A Reply