ಆಗಸ್ಟ್ 28ಕ್ಕೆ JEE ಅಡ್ವಾನ್ಸ್ಡ್ ಎಕ್ಸಾಂ, ಆಗಸ್ಟ್ 7 ರಿಂದ ನೋಂದಣಿ ಶುರು !

JEE ಅಡ್ವಾನ್ಸ್ಡ್ 2022 ಪರೀಕ್ಷೆಯ ದಿನಾಂಕವನ್ನು ಪರಿಷ್ಕೃತ ವೇಳಾಪಟ್ಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆ ಆಗಸ್ಟ್ 28 ರಂದು ಜೆಇಇ ಅಡ್ವಾನ್ಸ್ 2022 ಅನ್ನು ನಡೆಸುತ್ತದೆ ಅಂತ ಈಗ ತಿಳಿಸಿದೆ.

 

ಈ ಮೊದಲು ಪತ್ರಿಕೆಯನ್ನು ಜುಲೈ 3 ರಂದು ನಡೆಸಲು ನಿರ್ಧರಿಸಲಾಗಿತ್ತು.

JEE ಅಡ್ವಾನ್ಸ್ಡ್ 2022 ರ ಹೊಸ ಪರೀಕ್ಷೆಯ ದಿನಾಂಕವು ಅಧಿಕೃತ ವೆಬ್‌ಸೈಟ್ – jeeadv.ac.in ನಲ್ಲಿ ಲಭ್ಯವಿದೆ.

IIT JEE ಅಡ್ವಾನ್ಸ್ಡ್ 2022 ಕುರಿತು ಹೆಚ್ಚಿನ ನವೀಕರಣಗಳಿಗಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲನೆ
ಮಾಡಲು ತಿಳಿಸಲಾಗಿದೆ. ಜಂಟಿ ಪ್ರವೇಶ ಪರೀಕ್ಷೆ ಅಡ್ವಾನ್ಸ್ಡ್ ಎರಡು ಪತ್ರಿಕೆಗಳನ್ನು ಒಳಗೊಂಡಿದೆ.

-ಪೇಪರ್ 1 ಸಮಯ 09-00-12-00 IST

  • ಪೇಪರ್ 2 ಸಮಯ 14-30-17-30 IST

Leave A Reply

Your email address will not be published.