ಬೆಳ್ತಂಗಡಿ | ಕರಾಯದ ವ್ಯಕ್ತಿಗೆ ಕೊರೊನಾ ಪಾಸಿಟಿವ್
ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದಲ್ಲಿ ಮೊದಲ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಆ ಮೂಲಕ ಮೃತ್ಯು ಕೊರೋನಾ ನಮ್ಮ ಹಿತ್ತಲ ಬಳಿಗೆ ಬಂದು ಕೂತಿದೆ.
ಪುತ್ತೂರು ತಾಲೂಕಿನ ಆಸ್ಪತ್ರೆಗೆ ದಾಖಲಾದ ಕರಾಯದ 21 ವರ್ಷದ ವ್ಯಕ್ತಿ ಇತ್ತೀಚೆಗಷ್ಟೇ ದುಬೈನಿಂದ ಬಂದಿದ್ದರು ಎನ್ನಲಾಗಿದೆ. ದುಬೈನಿಂದ 21 ರಂದು ಆತ ಮಂಗಳೂರಿನ ಅಂತಾರಾಷ್ತ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಅಲ್ಲಿಂದ ksrtc ಬಸ್ ನ ಮುಖಾಂತರ ತನ್ನ ಊರು ಕರಾಯಕ್ಕೆ ಸೇರಿಕೊಂಡಿದ್ದ. ಆತ ಕರಾಯದ ಜನತಾ ಕಾಲೋನಿ ನಿವಾಸಿ.
ವಿದೇಶದಿಂದ ಊರಿಗೆ ಬಂದ ಹಿನ್ನೆಲೆಯಲ್ಲಿ ಆತನನ್ನು ಹೋಂ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಆದರೆ ಆತ ಸುತ್ತಮುತ್ತ ಗೆಳೆಯರೊಂದಿಗೆ ಸೇರಿಕೊಂಡು ಕ್ರಿಕೆಟ್ ಆಡಿದ್ದ. ಆತನ ಹೋಂ ಕ್ವಾರಂಟೈನ್ ನ ಕೊನೆಯ ದಿನವಾಗಿತ್ತು.ಮಾರ್ಚ್ 24 ರಂದು ಆತನಿಗೆ ಕೆಮ್ಮು ಮತ್ತು ಜ್ವರ ಕಾಣಿಸಿದ್ದು ಆತ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದ. ಅದೇ ದಿನ ಆತನ ಗಂಟಲ ದ್ರವವನ್ನು ಲ್ಯಾಬ್ ಗೆ ಕಳಿಸಲಾಗಿತ್ತು. ಈಗ ತಾನೇ ಮೆಡಿಕಲ್ ರಿಪೋರ್ಟ್ ಕೈ ಸೇರಿದ್ದು, ಆತನಿಗೆ ಕೊರಾನ್ ಸೋಂಕಿರುವುದು ಕನ್ಫರ್ಮ್ ಆಗಿದೆ.
ಕರಾಯ ಗ್ರಾಮಕ್ಕೆ ಬೆಳ್ತಂಗಡಿ ತಹಶೀಲ್ದಾರ್, ತಾಲೂಕು ವೈದ್ಯಾಧಿಕಾರಿ ಸೇರಿದಂತೆ ಅಧಿಕಾರಿಗಳು ತೆರಳಿದ್ದಾರೆ. ಕರಾಯ ಪ್ರದೇಶವನ್ನು ದಿಗ್ಬಂಧನಕ್ಕೆ ಒಡ್ಡಲಾಗುತ್ತಿದೆ.