ಅಡಿಕೆ ಕುರಿತು ವದಂತಿ ಹಬ್ಬಬೇಡಿ -ಗೃಹ ಸಚಿವ ಆರಗ ಜ್ಞಾನೇಂದ್ರ

Share the Article

ಬೆಂಗಳೂರು :ಯಾರೂ ಅಡಿಕೆ‌ ಕುರಿತು ಇಲ್ಲ ಸಲ್ಲದ ಹೇಳಿಕೆ ನೀಡಬಾರದು, ಇದರಿಂದ ಬೆಳೆಗಾರರಿಗೆ ತೊಂದರೆಯಾಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸೋಮವಾರ ಹೇಳಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು,ಅಡಿಕೆ‌ ಬ್ಯಾನ್ ಮಾಡುವ ವದಂತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ದೆಹಲಿಗೆ ರಾಜ್ಯದಿಂದ ನಿಯೋಗ ತೆರಳಿತ್ತು. ಕೇಂದ್ರ‌ ಸಚಿವರನ್ನ ಭೇಟಿಯಾಗಿ ಮಾತುಕತೆ‌ ನಡೆಸಲಾಗಿತ್ತು. ಸರ್ಕಾರದಿಂದ ವಿಶೇಷವಾಗಿ ಹೋರಾಟ ಮಾಡಿ‌ ರೈತರ ಹಿತ ಕಾಯುತ್ತೇವೆ ಎಂದರು.

ವದಂತಿಗಳಿಂದ ಅಡಿಕೆ‌ ಮಾರುಕಟ್ಟೆಯಲ್ಲಿ ಬೆಲೆ ವ್ಯತ್ಯಾಸವಾಗಲಿದೆ, ಇದರಿಂದ ಅಡಿಕೆ‌ ಬೆಳೆಗಾರರು ಸಂಕಷ್ಟಕ್ಕೆ‌ ಸಿಲುಕಲಿದ್ದಾರೆ. ಬೆಳೆಗಾರರ ಹಿತ ಕಾಯಲು ಸರ್ಕಾರ‌ ಬದ್ಧವಾಗಿದೆ ಎಂದರು.

Leave A Reply