Home latest ಪ್ರೇಮಿಯ ಮದುವೆಯ ದಿನದಂದೇ ಪ್ರೇಯಸಿ ನೇಣಿಗೆ ಶರಣು | ವಿಷಯ ತಿಳಿದ ಪ್ರೇಮಿ ನವವಧುವಿಗೆ ತಾಳಿಕಟ್ಟಿ...

ಪ್ರೇಮಿಯ ಮದುವೆಯ ದಿನದಂದೇ ಪ್ರೇಯಸಿ ನೇಣಿಗೆ ಶರಣು | ವಿಷಯ ತಿಳಿದ ಪ್ರೇಮಿ ನವವಧುವಿಗೆ ತಾಳಿಕಟ್ಟಿ ಮದುವೆ ಮಂಟಪದಿಂದ ಪರಾರಿ!

Hindu neighbor gifts plot of land

Hindu neighbour gifts land to Muslim journalist

ಶಿವಮೊಗ್ಗದವರೇ ಆಗಿದ್ದ ರೂಪಾ ಹಾಗೂ ಮುರಳಿ ಕಳೆದ ನಾಲೈದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಜಾತಿ ಬೇರೆ ಬೇರೆಯಾದರೂ ವೃತ್ತಿಯಲ್ಲಿ ಇಬ್ಬರೂ ಉಪನ್ಯಾಸಕರಾಗಿದ್ದರು. ಯುವಕ ಮುರಳಿ ಡಿವಿಎಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ. ರೂಪಾ ಸಹ್ಯಾದ್ರಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕಿ ಕೆಲಸ ಮಾಡುತ್ತಿದ್ದರು. ಜೊತೆಗೆ ಪಿಎಚ್.ಡಿ ಅಧ್ಯಯನ ಮಾಡುತ್ತಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇನ್ನೆರಡು ತಿಂಗಳಿನಲ್ಲಿ ಪಿಎಚ್‌ಡಿ ಪದವೀಧರೆಯಾಗುತ್ತಿದ್ದರು. ಆದರೆ ಅಷ್ಟರಲ್ಲೇ ಪ್ರೀತಿಯಲ್ಲಿ ಬಿದ್ದು ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ ಈ ಯುವತಿ.

ರೂಪಾಳಿಗೆ ಈ ಹಿಂದೆಯೇ ಮದುವೆ ಮಾಡಲು ಗಂಡು ಹುಡುಕಿದ್ದರು ಪೋಷಕರು. ಇಷ್ಟು ಮಾತ್ರವಲ್ಲದೆ ಸಾಕಷ್ಟು ಕಡೆಯಿಂದಲೂ ಸಂಬಂಧಗಳು ಬಂದಿದ್ದವು. ಆದರೆ ರೂಪ ಯಾವುದನ್ನೂ ಒಪ್ಪಿಕೊಂಡಿರಲಿಲ್ಲ. ಪಿಎಚ್‌ಡಿ ಮುಗಿದ ಬಳಿಕ ಪ್ರೀತಿಯ ವಿಷಯವನ್ನು ಮನೆಯವರಿಗೆ ತಿಳಿಸಿ, ಮದುವೆಯಾಗೋಣವೆಂದು ಮುಂದೂಡುತ್ತಾ ಬಂದಿದ್ದರು. 2 ತಿಂಗಳ ಹಿಂದೆ ಮಗಳ ಪ್ರೀತಿ ವಿಷಯ ಮನೆಯಲ್ಲಿ ಗೊತ್ತಾಗಿ ಗಲಾಟೆಯೂ ನಡೆದಿತ್ತು. ಇದರಿಂದ ಮನನೊಂದಿದ್ದ ರೂಪಾ ಫೆಬ್ರವರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದಳು. ನಂತರ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದಳು.

ಅನಂತರ ರೂಪಾ ಪೋಷಕರೇ ಜಾತಿ ಬೇರೆಯಾಗಿದ್ದರೂ ಪರವಾಗಿಲ್ಲ, ಮಗಳು ಚೆನ್ನಾಗಿದ್ದರೆ ಸಾಕು ಎಂದು ಮುರಳಿ ಜೊತೆ ವಿವಾಹ ಮಾಡಲು ಒಪ್ಪಿಗೆ ಕೂಡ ಕೊಟ್ಟಿದ್ದರು.

ಆದರೆ ಏನಾಯಿತೋ ಗೊತ್ತಿಲ್ಲ, ಇತ್ತ ಮುರಳಿ ರೂಪಾಳಿಗೆ ಕೈಕೊಟ್ಟು ಮಾ.20 ರಂದು (ಭಾನುವಾರ) ಶಿವಮೊಗ್ಗದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಪಲ್ಲವಿ ಎಂಬ ಯುವತಿಯೊಂದಿಗೆ ಮದುವೆ ಮಾಡಿಕೊಂಡಿದ್ದಾನೆ. ಇದರಿಂದ ಮನನೊಂದ ರೂಪ ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇತ್ತ ಕಡೆ ಪಲ್ಲವಿಗೆ ತಾಳಿ ಕಟ್ಟುತ್ತಿದ್ದಂತೆ ಮುರಳಿಗೆ ರೂಪ
ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿಯುತ್ತದೆ. ಕೂಡಲೇ ಭಯದಿಂದ ಆತ ಕಲ್ಯಾಣ ಮಂಟಪದಿಂದಲೇ ಪರಾರಿಯಾಗಿದ್ದಾನೆ.

ಈ ಪ್ರಕರಣ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುರಳಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.