ಉಡುಪಿ: ಕೆಮ್ಮುವಿನ ಸಿರಪ್ ಎಂದು ಭಾವಿಸಿ ಇಲಿ ಪಾಷಾಣ ಕುಡಿದ ಮಹಿಳೆ ಸಾವು

Share the Article

ಕೆಮ್ಮುವಿನ ಸಿರಪ್ ಅಂದುಕೊಂಡು ಬಾಟಲಿಯಲ್ಲಿದ್ದ ಇಲಿ ಪಾಷಾಣವನ್ನು ಕುಡಿದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬ್ರಹ್ಮಾವರದ ಪೆಜಮಂಗೂರು ಗ್ರಾಮದ ಗುಂಡಾಲು ಎಂಬಲ್ಲಿ ನಡೆದಿದೆ.

ಶೀನ ನಾಯ್ಕ ಎಂಬವರ ಪತ್ನಿ ದೇವಕಿ(47) ಮೃತ ಮಹಿಳೆ.

ದೇವಕಿ ಅವರಿಗೆ ಕೆಮ್ಮು ಇದ್ದ ಕಾರಣ ಸಿರಪ್ ಎಂದು ಭಾವಿಸಿ ಇಲಿ ಪಾಷಾಣ ಕುಡಿದು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಕೆಲ ದಿನಗಳ ಜೀವನ್ಮರಣದ ಹೋರಾಟದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Leave A Reply