ಮಹಿಳೆಯರಿಗಾಗಿಯೇ ಸರ್ಕಾರ ಜಾರಿಗೊಳಿಸಿದೆ ಈ ಯೋಜನೆ|ಅರ್ಹ ಮಹಿಳೆಯರಿಗೆ ದೊರೆಯಲಿದೆ ರೂ.6000|ಈ ಯೋಜನೆಯ ಕುರಿತು ಮಾಹಿತಿ ಇಲ್ಲಿದೆ..

ಮಹಿಳೆಗೆ ತನ್ನ ಮಗುವಿನ ರಕ್ಷಣೆಯನ್ನು ಯಾವುದೇ ಆರ್ಥಿಕ ತೊಂದರೆ ಇಲ್ಲದೆ ಮಾಡಲು ಸರ್ಕಾರ ನೆರವು ನೀಡುತ್ತಿದೆ.ಕೇವಲ‌ ಮಹಿಳೆಯರಿಗಾಗಿಯೇ ಕೇಂದ್ರ ಸರ್ಕಾರ ಈ ಯೋಜನೆಯನ್ನು‌ ಹಮ್ಮಿಕೊಂಡಿದ್ದು, ಇದರ ಅಡಿಯಲ್ಲಿ ನೇರವಾಗಿ ಮಹಿಳೆಯರ ಖಾತೆಗೆ ಹಣ ವರ್ಗಾಯಿಸಲಾಗುತ್ತದೆ.

ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ , ಇದರ ಅಡಿಯಲ್ಲಿ ಕೇಂದ್ರ ಸರ್ಕಾರವು ಮಹಿಳಾ ಫಲಾನುಭವಿಗಳಿಗೆ 6000 ರೂ. ವರ್ಗಾಯಿಸುತ್ತದೆ. ಈ ಯೋಜನೆಯ ಪ್ರಯೋಜನವನ್ನು ಮಹಿಳೆಯರಿಗೆ ಮಾತ್ರ ನೀಡಲಾಗುತ್ತದೆ, ಯಾವುದೇ ಪುರುಷ ಇದಕ್ಕೆ ಅರ್ಜಿ ಸಲ್ಲಿಸುವಂತಿಲ್ಲ.

ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ ಅಡಿಯಲ್ಲಿ, ಮೊದಲ ಬಾರಿಗೆ ಗರ್ಭಿಣಿಯಾದವರಿಗೆ ಮತ್ತು ಹಾಲುಣಿಸುವ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಯನ್ನು, ಜನವರಿ 1, 2017 ರಲ್ಲಿ ಪ್ರಾರಂಭಿಸಲಾಗಿದೆ.ಎಲ್ಲಾ ಗರ್ಭಿಣಿ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಪೋಷಕರ ಆಧಾರ್ ಕಾರ್ಡ್, ಪೋಷಕರ ಗುರುತಿನ ಚೀಟಿ, ಮಗುವಿನ ಜನನ ಪ್ರಮಾಣಪತ್ರ, ಬ್ಯಾಂಕ್ ಖಾತೆಯ ಪಾಸ್ ಬುಕ್ ಸಲ್ಲಿಸಿ ಅರ್ಜಿ‌ ಹಾಕಬಹುದು.‌

ತಾಯಿ ಮತ್ತು ಮಗುವಿನ ಸರಿಯಾದ ಆರೈಕೆಯ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು,ಇದಕ್ಕಾಗಿ ಸರ್ಕಾರವು 6000 ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡುತ್ತದೆ. ಸರ್ಕಾರವು ಈ ಹಣವನ್ನು 3 ಹಂತಗಳಲ್ಲಿ ನೀಡುತ್ತದೆ. ಗರ್ಭಿಣಿಯ ಮಹಿಳೆಯರಿಗೆ, ಮೊದಲ ಹಂತದಲ್ಲಿ 1000, ಎರಡನೇ ಹಂತದಲ್ಲಿ 2000 ಹಾಗೂ ಮೂರನೇ ಹಂತದಲ್ಲಿ 2000 ರೂ. ನೀಡಲಾಗುತ್ತದೆ. ಉಳಿದ ಒಂದು ಸಾವಿರ ರೂಪಾಯಿಯನ್ನು, ಮಗು ಹುಟ್ಟಿದಾಗ ಆಸ್ಪತ್ರೆಗೆ ವರ್ಗಾಯಿಸುತ್ತದೆ.

Leave A Reply

Your email address will not be published.