Home International 1999 ರಲ್ಲಿ ಏರ್ ಇಂಡಿಯಾ ವಿಮಾನವನ್ನು ಹೈಜಾಕ್ ಮಾಡಿದ್ದ ಭಯೋತ್ಪಾದಕನ ಹತ್ಯೆ!! | ಪಾಕಿಸ್ತಾನದಲ್ಲಿ ಜಹೂರ್...

1999 ರಲ್ಲಿ ಏರ್ ಇಂಡಿಯಾ ವಿಮಾನವನ್ನು ಹೈಜಾಕ್ ಮಾಡಿದ್ದ ಭಯೋತ್ಪಾದಕನ ಹತ್ಯೆ!! | ಪಾಕಿಸ್ತಾನದಲ್ಲಿ ಜಹೂರ್ ಮಿಸ್ತ್ರಿಯ ಮೇಲೆ ಹಲ್ಲೆ ನಡೆಸಿ ಕೊಂದ ದುಷ್ಕರ್ಮಿಗಳು

Hindu neighbor gifts plot of land

Hindu neighbour gifts land to Muslim journalist

1999ರಲ್ಲಿ ಏರ್ ಇಂಡಿಯಾ ವಿಮಾನವನ್ನು ಹೈಜಾಕ್ ಮಾಡಿದ್ದ ಭಯೋತ್ಪಾದಕ ಕೊನೆಗೂ ಹತನಾಗಿದ್ದಾನೆ. ಆತನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

1999ರಲ್ಲಿ ಏರ್ ಇಂಡಿಯಾ ವಿಮಾನ ಐಸಿ-814 ಅನ್ನು ಹೈಜಾಕ್ ಮಾಡಿದ ಭಯೋತ್ಪಾದಕರಲ್ಲಿ ಒಬ್ಬನಾದ ಜಹೂರ್ ಮಿಸ್ತ್ರಿ ಅಲಿಯಾಸ್ ಜಾಹಿದ್ ಅಖುಂಡ್ ಪಾಕಿಸ್ತಾನದ ಕರಾಚಿಯಲ್ಲಿ ಕೊಲ್ಲಲ್ಪಟ್ಟಿದ್ದಾನೆ. ಮಾರ್ಚ್ 1 ರಂದು ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ಜಹೂರ್ ಮಿಸ್ತ್ರಿ ತನ್ನ ಮನೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಜಹೂರ್ ಭಯೋತ್ಪಾದಕ ಸಂಘಟನೆ ಜೈಶ್-ಎ-ಮುಹಮ್ಮದ್ ಜೊತೆ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಉದ್ಯಮಿಯಂತೆ ನಟಿಸಿ ತಲೆಮರೆಸಿಕೊಂಡಿದ್ದ. ಇಬ್ಬರು ದಾಳಿಕೋರರು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮಾಸ್ಕ್ ಧರಿಸಿದ್ದರಿಂದ ಗುರುತು ಪತ್ತೆಯಾಗಿಲ್ಲ. ಬೈಕ್ ಸವಾರರಿಬ್ಬರೂ ಆ ಪ್ರದೇಶದಲ್ಲಿ ವಿಹಾರ ನಡೆಸಿದ ಬಳಿಕ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

1999ರಲ್ಲಿ ಐಸಿ-814 ವಿಮಾನದ 176 ಪ್ರಯಾಣಿಕರನ್ನು ಅಪಹರಣಕಾರರು ಏಳು ದಿನಗಳ ಕಾಲ ಒತ್ತೆಯಾಳಾಗಿ ಇರಿಸಿದ್ದರು. ವಿಮಾನವು ಕಠ್ಮಂಡುವಿನಿಂದ ಹೊರಟು ದೆಹಲಿಗೆ ಹೋಗುತ್ತಿತ್ತು. ಆದರೆ ಅದನ್ನು ಅಪಹರಿಸಿ ಅಫ್ಘಾನಿಸ್ತಾನದ ಕಂದಹಾರ್ ಗೆ ಕೊಂಡೊಯ್ಯಲಾಯಿತು. ಈ ಅಪಹರಣ ಕಾರ್ಯಾಚರಣೆಯನ್ನು ಪಾಕಿಸ್ತಾನದ ಮಿಲಿಟರಿ ಗುಪ್ತಚರ, ಐಎಸ್‌ಐ ಬೆಂಬಲಿಸಿದೆ ಎಂದು ಹೇಳಲಾಗಿದೆ.

ಇದರಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್, ನಿಷ್ಕ್ರಿಯ ಭಯೋತ್ಪಾದಕ ಗುಂಪಿನ ನಾಯಕ ಅಲ್ ಉಮರ್ ಮುಜಾಹಿದ್ದೀನ್, ಮುಷ್ತಾಕ್ ಅಹ್ಮದ್ ಜರ್ಗರ್ ಮತ್ತು ಬ್ರಿಟಿಷ್ ಮೂಲದ ಅಲ್-ಖೈದಾ ನಾಯಕ ಅಹ್ಮದ್ ಒಮರ್ ಸಯೀದ್ ಇವರನ್ನು ಭಾರತೀಯ ಜೈಲುಗಳಿಂದ ಬಿಡುಗಡೆಗೊಳಿಸಲಾಗಿದೆ.