ಬೀದಿ-ಬೀದಿಗಳಲ್ಲಿ ಬಲೂನ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಹುಡುಗಿ ಇದೀಗ ಮಾಡೆಲ್ |ಅಷ್ಟಕ್ಕೂ ಆಕೆಯ ಈ ಬದಲಾವಣೆಯ ಹಿಂದಿರುವ ಕೈ ಯಾರದ್ದು ಗೊತ್ತೇ!!?|ಸುಂದರ ಕನಸನ್ನು ನನಸಾಗಿಸಿದ ಹಾಗೂ ನನಸಾಗಿಸಿದವನ ಕಥೆ ಇಲ್ಲಿದೆ..

Share the Article

ಅದೆಷ್ಟೋ ಜಾತ್ರೆ,ಹಬ್ಬಗಳು ಕೆಲವೊಂದಿಷ್ಟು ಜನರ ಪಾಲಿಗೆ ಸಂಭ್ರಮದ ದಿನವಾದರೆ, ಅದೇ ಇನ್ನೂ ಕೆಲವು ಕಾಣದ ಮುಖಗಳಿಗೆ ಹೊಟ್ಟೆಗೊಂದಿಷ್ಟು ಅನ್ನ ಸಿಗುವ ಶುಭಗಲಿಗೆ. ಅದೆಷ್ಟೋ ಕನಸುಗಳನ್ನು ಹೊತ್ತ ಮುಗ್ಧ ಜೀವಗಳಿಗೆ ನನಸಾಗೋ ಭಾಗ್ಯ ಬಂದರೆ ಅದೆಷ್ಟು ಚಂದವಿರಬಹುದಲ್ಲವೇ ಅವರ ಜೀವನ..

ಹೌದು. ಬದುಕಲ್ಲಿ ಕಷ್ಟ ನೋಡಿದರೂ ಅವರ ಪ್ರತಿಭೆ, ಆಸಕ್ತಿ ಹೊಟ್ಟೆ ಹಸಿವಿನಿಂದ ಅಧಿಕವಾಗಿರುತ್ತೆ ವಿನಃ ಕಡಿಮೆ ಅಂತೂ ಆಗಕೂಡದು.ಇಂತಹ ನಿಷ್ಕಲ್ಮಶ ಮನಸ್ಸಿರುವ ಕನಸಿನ ಹುಡುಗಿಗೆ ರೆಕ್ಕೆ ಕಟ್ಟಿದ ಸುಂದರವಾದ ನಿಜ ಕಥೆ ಇದು. ಆತ ಮಾತ್ರ ನಿಜವಾಗಿಯೂ ಆಕೆಯ ಪಾಲಿಗೆ ದೇವರೇ ಸರಿ.. ಯಾಕಂದ್ರೆ ಆಕೆ ಇದ್ದಿದ್ದು ತನ್ನ ಹೊಟ್ಟೆ ಪಾಡಿಗಾಗಿ ಬೀದಿ-ಬೀದಿಗಳಲ್ಲಿ ಬಲೂನ್ ಮಾರಾಟ ಮಾಡಿ ಇತರರ ನಗುವನ್ನು ಕಂಡು ಸಂಭ್ರಮಿಸುವವಳು. ಆಕೆಯ ಕನಸು ಅದೇ ಇನ್ನೊಬ್ಬರನ್ನು ನಗಿಸುವುದು. ಆತನ ಕನಸು ಇನ್ನೊಬ್ಬರ ನೋವು ನಲಿವಿನ ಸುಂದರ ಕ್ಷಣವನ್ನು ಕ್ಲಿಕ್ ಮಾಡುವುದು.

ಈ ಹುಡುಗಿ ಜಾತ್ರೆಯಲ್ಲಿ ಬಲೂನ್ ಮಾರುತ್ತಿರುವವಳಾಗಿದ್ದು,ಪಯ್ಯನ್ನೂರು ಮೂಲದ ಛಾಯಾಗ್ರಾಹಕ ಅರ್ಜುನ್ ಕೃಷ್ಣನ್ ಕಣ್ಣಿಗೆ ಬಿದ್ದವಳು. ಅಂದೇ ಆಕೆಯ ಅದೃಷ್ಟ ಬದಲಾಯಿತು. ಯಾಕಂದ್ರೆ ಆತನ ಕ್ಯಾಮರಾ ಕಣ್ಣೊಳಗೆ ಬಿದ್ದ ಆಕೆಯ ಫೋಟೋ ಇದೀಗ ಆಕೆಯ ಮೇಕ್ ಓವರ್ ಫೋಟೋಗಳಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಕಣ್ಣೂರು ಅಂದಲ್ಲೂರ್ಕಾವು ಉತ್ಸವದಲ್ಲಿ ಕಿಸ್ಬು ಎಂಬ ಹುಡುಗಿ ಬಲೂನ್ ಮಾರಾಟ ಮಾಡುತ್ತಿದ್ದ ವೇಳೆ ಛಾಯಾಗ್ರಾಹಕ ಅರ್ಜುನ್ ಕೃಷ್ಣನ್ ಅವರ ಕಣ್ಣಿಗೆ ಬಿದ್ದಿದ್ದು, ಆಕೆ ಆಕಾಶಬುಟ್ಟಿಗಳು ಮತ್ತು ದೀಪಗಳ ನಡುವೆ ನಿಂತಿದ್ದಳು.ಇದನ್ನೇ ಗಮನಿಸಿದ ಛಾಯಾಗ್ರಾಹಕ ಹುಡುಗಿಯ ಫೋಟೋ ಕ್ಲಿಕ್ಕಿಸಿದ್ದಾರೆ. ನಂತರ ಈ ಫೋಟೋವನ್ನು ಹುಡುಗಿಯಾ ತಾಯಿಗೂ ತೋರಿಸಲಾಗಿದ್ದು ಅವರು ಕೂಡಾ ಮಗಳ ಫೋಟೋ ನೋಡಿ ಸಂತೋಷ ಪಟ್ಟಿದ್ದಾರೆ.

ಇನ್ನು ಎರಡು ದಿನಗಳ ನಂತರ ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋ ಶೇರ್ ಆದ ತಕ್ಷಣವೇ ಫೋಟೋಗೆ ಅದ್ಬುತ ಪ್ರತಿಕ್ರಿಯೆ ಸಿಕ್ಕಿದ್ದು, ಬಳಿಕ ಅರ್ಜುನ್ ಕಿಸ್ಬು ಜೊತೆ ಮೇಕ್ ಓವರ್ ಫೋಟೋ ಶೂಟ್ ಮಾಡಿಸಿದ್ದಾರೆ. ಸ್ಟೈಲಿಸ್ಟ್ ರಮ್ಯಾ ಅವರ ಸಹಾಯದಿಂದ ಅರ್ಜುನ್ ಕಿಸ್ಬು ಅವರ ಕೆಲವು ಸುಂದರವಾದ ಚಿತ್ರಗಳನ್ನು ಚಿತ್ರೀಕರಿಸಿದ್ದು ಸದ್ಯ ಈ ಪೋಟೊಗಳು ಸಖತ್ ವೈರಲ್ ಆಗಿದೆ.ಈ ಪೋಟೊವನ್ನು ಗಮನಿಸಿ ಕಿಸ್ಬುಗೆ ಸಾಕಷ್ಟು ಆಫರ್ ಕೂಡ ಸಿಕ್ಕಿದ್ದು, ಅರ್ಜುನ್ 15 ವರ್ಷಗಳಿಂದ ಫ್ರೀಲಾನ್ಸ್ ವೆಡ್ಡಿಂಗ್ ಫೋಟೋಗ್ರಾಫರ್ ಆಗಿದ್ದಾರೆ.

https://www.instagram.com/p/Caj1YEwJNXD/?utm_source=ig_embed&utm_campaign=embed_video_watch_again
Leave A Reply