Home Entertainment ಏಳು ಜಿಲ್ಲೆಗಳಲ್ಲಿ ಇಂಟರ್‌ನೆಟ್ ನಿರ್ಬಂಧ : ಗೃಹ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುತ್ತೋಲೆ

ಏಳು ಜಿಲ್ಲೆಗಳಲ್ಲಿ ಇಂಟರ್‌ನೆಟ್ ನಿರ್ಬಂಧ : ಗೃಹ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುತ್ತೋಲೆ

Hindu neighbor gifts plot of land

Hindu neighbour gifts land to Muslim journalist

ಇಂಟರ್‌ನೆಟ್ ಇಲ್ಲದಿದ್ದರೆ ಯಾವುದೂ ನೆಟ್ಟಗಿಲ್ಲ ಅಂತೆನಿಸುವುದು ಸಹಜ. ಸುಲಭದಲ್ಲಿ ಕೆಲವೇ ನಿಮಿಷಗಳಲ್ಲಿ ಆಗಬಹುದಾದ ಅದೆಷ್ಟೋ ಕೆಲಸಗಳಿಗೂ ಗಂಟೆಗಟ್ಟಲೆ ಸಮಯ ಬೇಕಾಗಬಹುದು.

ಅಂಥದೊಂದು ಪರಿಸ್ಥಿತಿ ಪಶ್ಚಿಮ ಬಂಗಾಳದ ಏಳು ಜಿಲ್ಲೆಗಳ ಜನರು ಮುಂದಿನ ಕೆಲವು ದಿನಗಳವರೆಗೆ ಎದುರಿಸಬೇಕಾಗಿದೆ. ಏಕೆಂದರೆ, ಇಂಟರ್‌ನೆಟ್‌ಗೆ ನಿರ್ಬಂಧ ಹೇರಿ ಪಶ್ಚಿಮ ಬಂಗಾಳದ ಗೃಹ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ.

ಅಂತರ್ಜಾಲ ಸಂಪರ್ಕ ಬಳಸಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯಲಿವೆ ಎಂದು ಗುಪ್ತದಳ ಸರ್ಕಾರಕ್ಕೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ನಿರ್ಬಂಧ ಹೇರಲಾಗಿದೆ.

ಆದರೆ ವಾಯ್ಸ್ ಕಾಲ್, ಎಸ್‌ಎಂಎಸ್‌ ಹಾಗೂ ಪತ್ರಿಕೆಗಳಿಗೆ ನಿರ್ಬಂಧವಿಲ್ಲ.