ನೀವು ಕೂಡ ಬಿಳಿ ಕೂದಲ ಸಮಸ್ಯೆಗೆ ತುತ್ತಾಗಿದ್ದೀರಾ?? | ಈ ಎರಡು ಎಲೆಗಳನ್ನು ಬಳಸಿ ನಿಮ್ಮ ಸಮಸ್ಯೆಗೆ ಗುಡ್ ಬೈ ಹೇಳಿ !!

Share the Article

ಇತ್ತೀಚೆಗೆ ಸಾಮಾನ್ಯವಾಗಿ ಬಹುತೇಕರು ಅತಿ ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ಅನಾರೋಗ್ಯಕರ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿ ಎಂದರೆ ತಪ್ಪಾಗಲಾರದು. ಆದರೆ ಈ ಸಮಸ್ಯೆಯ ಪರಿಹಾರಕ್ಕಾಗಿ ಜನ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಕಲರ್ ಗಳ ಮೊರೆ ಹೋಗುತ್ತಾರೆ.

ಬಿಳಿ ಕೂದಲನ್ನು ಮರೆಮಾಚಲು ಜನರು ಅನೇಕ ದುಬಾರಿ ಕೂದಲು ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಈ ಉತ್ಪನ್ನಗಳಲ್ಲಿ ಅನೇಕ ಹಾನಿಕಾರಕ ರಾಸಾಯನಿಕಗಳು ಕಂಡುಬರುತ್ತವೆ. ಇದು ಕೂದಲಿಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮನೆಮದ್ದುಗಳ ಸಹಾಯದಿಂದ ಬಿಳಿ ಕೂದಲನ್ನು ತೊಡೆದುಹಾಕಬಹುದು.

ತಜ್ಞರ ಪ್ರಕಾರ, ತುಳಸಿ ಎಲೆಗಳು ಮತ್ತು ಕರಿಬೇವಿನ ಎಲೆಗಳು ಕೂದಲನ್ನು ಕಪ್ಪಾಗಿಸಲು ಪ್ರಯೋಜನಕಾರಿ ಎಲೆಗಳಾಗಿವೆ. ತುಳಸಿಯಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಸಮೃದ್ಧವಾಗಿರುತ್ತವೆ. ಇದು ಬಿಳಿ ಕೂದಲನ್ನು ಕಪ್ಪಾಗಿಸಲು ತುಂಬಾನೇ ಸಹಾಯ ಮಾಡುತ್ತದೆ.

ತುಳಸಿ ಎಲೆಗಳನ್ನು ಬಳಸುವುದು ಹೇಗೆ??

*ಮೊದಲನೆಯದಾಗಿ, ತುಳಸಿ ಎಲೆಗಳನ್ನು ತೆಗೆದುಕೊಳ್ಳಿ.
*ಈಗ ನೆಲ್ಲಿಕಾಯಿ ಅಥವಾ ಅದರ ಎಲೆಗಳ ರಸವನ್ನು ತೆಗೆದುಕೊಳ್ಳಿ.
*ತುಳಸಿಎಲೆ , ನೆಲ್ಲಿಕಾಯಿ ಎಲೆ ಎಷ್ಟು ಪ್ರಮಾಣದಲ್ಲಿ ತೆಗೆದುಕೊಂಡಿರುತ್ತಿರೋ ಅಷ್ಟೇ ಪ್ರಮಾಣದಲ್ಲಿ ಭೃಂಗರಾಜ ಅಥವಾ ಗರುಗ ಎಳೆಯನ್ನು ಬಳಸಿ.
*ಈಗ ಈ ಮೂರು ಎಲೆಗಳನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಅದನ್ನು ಕೂದಲಿಗೆ ಚೆನ್ನಾಗಿ ಹಚ್ಚಿ. ಇದು ಕೂದಲನ್ನು ಕಪ್ಪಾಗಿಸುವಲ್ಲಿ ಪ್ರಯೋಜನಕಾರಿಯಾಗಿದೆ.

ಕರಿಬೇವಿನ ಎಲೆಗಳನ್ನು ಹೇಗೆ ಬಳಸುವುದು ??

ಕರಿಬೇವಿನ ಎಲೆಗಳಲ್ಲಿ ಜೈವಿಕ-ಸಕ್ರಿಯ ಅಂಶಗಳು ಕಂಡುಬರುತ್ತವೆ. ಇದು ಕೂದಲಿಗೆ ಸಂಪೂರ್ಣ ಪೋಷಣೆಯನ್ನು ನೀಡುತ್ತದೆ. ಚಿಕ್ಕ ವಯಸ್ಸಿನಲ್ಲೇ ಎದುರಾಗುವ ಬಿಳಿ ಕೂದಲಿನ ಸಮಸ್ಯೆಯನ್ನು ಇದು ಹೋಗಲಾಡಿಸುತ್ತದೆ. ಇದಕ್ಕಾಗಿ ಕರಿಬೇವಿನ ಎಲೆಗಳನ್ನು ಕೂದಲಿಗೆ ಹಚ್ಚಿಕೊಳ್ಳಬಹುದು. ಅಥವಾ ತಲೆಗೆ ಹಚ್ಚುವ ಎಣ್ಣೆಗೆ ಕರಿಬೇವಿನ ಎಲೆಗಳನ್ನು ಸೇರಿಸಿ ಆ ಎಣ್ಣೆಯನ್ನು ಕೂದಲಿಗೆ ಹಚ್ಚಿದರೂ ಪರಿಣಾಮ ಬೀರುತ್ತದೆ.

Leave A Reply