ಸಿ ಎಂ ಯಡಿಯೂರಪ್ಪ ಪ್ಯಾಕೇಜ್ ಘೋಷಣೆ । ಪ್ರಧಾನಿ ಮೋದಿ ರಾತ್ರಿ 8 ಕ್ಕೆ ದೇಶವನ್ನುದ್ದೇಶಿಸಿ ಭಾಷಣ, ಭರಪೂರ ಪ್ಯಾಕೇಜ್ ನಿರೀಕ್ಷೆ

ಬೆಂಗಳೂರು : ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೊರೋನಾ ಕರ್ನಾಟಕದಲ್ಲಿ ಕೂಡಾ ಹಾವಳಿ ಎಬ್ಬಿಸಿ ಕಳವಳ ಎಬ್ಬಿಸುತ್ತಿರುವ ಈ ಸಂದರ್ಭದಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ ಸಿಎಂ ಯಡಿಯೂರಪ್ಪನವರು. ರಾತ್ರಿ ಎಂಟು ಗಂಟೆಗೆ ಪ್ರಧಾನಿ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದು, ಕೊರೋನಾ ಸಂತ್ರಸ್ಥ ಮತ್ತು ತೊಂದರೆಗೀಡಾಗಬಹುದಾದ ಎಲ್ಲಾ ವರ್ಗದ ಜನರಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ. ಮಾ. 22 ರಂದು ದೇಶವನ್ನುದ್ದೇಶಿಸಿ ಮಾತನಾಡಿದ್ದ ಅವರು ಜನತಾ ಕರ್ಫ್ಯು ಗೆ ಕರೆ ನೀಡಿದ್ದರು.

ಸಿ ಎಂ ಯಡಿಯೂರಪ್ಪ ಪ್ಯಾಕೇಜ್ ಮುಖ್ಯಾಂಶಗಳು :

  • ಕೊರೋನಾ ವೈರಸ್ ಭೀತಿ ಹಿನ್ನಲೆಯಲ್ಲಿ 20 ಲಕ್ಷ ಕಟ್ಟಡ ಕಾರ್ಮಿಕರಿಗೆ 1000 ವೇತನ
  • 2 ತಿಂಗಳ ಪಡಿತರ ಮುಂಗಡ ವಿತರಣೆ
  • ಸಾಮಾಜಿಕ ಭದ್ರತಾ ಪಿಂಚಣಿ ಹಣವನ್ನೂ ಕೂಡ ಮುಂಗಡವಾಗಿ ನೀಡಲು ಸರ್ಕಾರ ನಿರ್ಧಾರ
  • ಬಡವರ ಬಂಧು ಯೋಜನೆಯಲ್ಲಿ ಸಾಲ ಪಡೆದವರ ಸಂಪೂರ್ಣ ಸಾಲ ಮನ್ನಾ
  • ಜಂಗುಳಿ ಸೇರುವ ಕಾರಣದಿಂದ ಇಂದಿರಾ ಕ್ಯಾಂಟೀನ್ ಬಂದ್

ಮಾರಕ ಕೊರೋನಾ ವೈರಸ್ ಹಬ್ಬುತ್ತಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿ ಮಾಡಲಾಗಿದ್ದು, ಈ ಕಾರಣಕ್ಕೆ ಬಡವರಿಗೆ ಯಾವುದೇ ತೊಂದರೆಯಾಗದ ನಿಟ್ಟಿನಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ 1000 ರೂ ಸಹಾಯ ಧನ ನೀಡಲು ನಿರ್ಧರಿಸಲಾಗಿದೆ. ಹಾಗೆಯೆ ರೇಷನ್ ಕಾರ್ಡ್ ಹೊಂದಿರುವವರಿಗೆ 2 ತಿಂಗಳ ರೇಷನ್ ಅನ್ನು ಮುಂಗಡವಾಗಿ ನೀಡಲು ಸರ್ಕಾರ ನಿರ್ಧರಿಸಿದೆ.

ಇನ್ನು ಪಿಂಚಣಿ ಹಣವನ್ನೂ ಕೂಡ ಮುಂಗಡವಾಗಿ ನೀಡಲು ಸರ್ಕಾರ ನಿರ್ಧರಿಸಿದ್ದು, ಎರಡು ತಿಂಗಳ ಮಾನವ ದಿನಗಳ ಮೊತ್ತವನ್ನು ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ. ಬಡವರ ಬಂಧು ಯೋಜನೆಯಲ್ಲಿ ಸಾಲ ಪಡೆದವರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಕೂಡಾ ಸರಕಾರ ಘೋಷಣೆ ಮಾಡಿದೆ.

Leave A Reply

Your email address will not be published.