

ಪ್ರಕೃತಿಯಲ್ಲಿ ಹಲವು ರೀತಿಯ ಬದಲಾವಣೆ, ಅಚ್ಚರಿಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವೊಂದು ಬಹಳ ವಿರಳವಾಗಿ ನಡೆಯುವಂತಹ ಸನ್ನಿವೇಶಗಳಾಗಿದ್ದು ಕೇಳುಗರಿಗೆ ಅಚ್ಚರಿ ಉಂಟು ಮಾಡುತ್ತವೆ. ಅಂತಹುದೇ ಒಂದು ಆಶ್ಚರ್ಯವಾದ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ಇಲ್ಲಿನ ಸ್ಯಾನ್ ಪ್ಯಾಬ್ಲೋದ ಒಡಾಲಿಸ್ ಹಾಗೂ ಅಂಟೋನಿಯಾ ಮಾರ್ಟಿನೆಜ್ ದಂಪತಿಗಳಿಗೆ ಇಬ್ಬರು ಮಕ್ಕಳು ಜನಸಿದ್ದಾರೆ. ಇದರಲ್ಲಿ ಏನು ವಿಶೇಷ ಎಂದು ತಲೆ ಮೇಲೆ ಕೈಹೊತ್ತು ಕೂರುವ ಮೊದಲು ಈ ಸ್ಟೋರಿಯನ್ನು ಪೂರ್ತಿ ಓದಿಕೊಳ್ಳುವುದು ಉತ್ತಮ.
ಸದ್ಯ ಅವಳಿ ಮಕ್ಕಳನ್ನು ಹೆತ್ತ ಮಹಿಳೆ ಈ ಮೊದಲು ಗರ್ಭಪಾತಕ್ಕೆ ಒಳಗಾಗಿದ್ದು, ಆ ಬಳಿಕ ಮತ್ತೊಮ್ಮೆ ಗರ್ಭಧರಿಸಿ ಕೊಂಡಿದ್ದರು. ಒಂದು ಮಗುವಿನ ಗರ್ಭ ಧರಿಸಿ ಒಂದು ವಾರದ ಒಳಗೆ ಇನ್ನೊಂದು ಮಗುವಿನ ಗರ್ಭ ಧರಿಸಿದ್ದು, ಎರಡೂ ಮಕ್ಕಳಿಗೂ ಒಂದೇ ಬಾರಿಗೆ ಜನ್ಮ ನೀಡಿದ್ದಾರೆ.ಒಂದು ವಾರಗಳ ಅಂತರ ಇರುವ ಮಕ್ಕಳು ಅರೋಗ್ಯವಾಗಿದ್ದು, ವಯಸ್ಸಿನಲ್ಲಿ ಒಂದು ವಾರಗಳ ಅಂತರವಿದೆ ಎಂಬುವುದು ಸ್ಕ್ಯಾನ್ ಮಾಡಿಸುವಾಗಲೇ ತಿಳಿದುಬಂದಿತ್ತು.













