ಬೆಳ್ಳಾರೆ: ಪರ್ಸನಲ್ ಕಾಂಟಾಕ್ಟ್ ಪ್ರೋಗ್ರಾಂ ಆ್ಯಂಡ್ ಫೆಸಿಲಿಟೇಶನ್ ಕ್ಯಾಂಪೇನ್

ನೆಹರು ಯುವ ಕೇಂದ್ರ ಮಂಗಳೂರು ವತಿಯಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಷಣ್ಮುಖ ಯುವಕ‌ ಮಂಡಲ (ರಿ.) ಸರ್ವೆ ಇದರ ಸಹಯೋಗದಲ್ಲಿ ಪರ್ಸನಲ್ ಕಾಂಟಾಕ್ಟ್ ಪ್ರೋಗ್ರಾಂ ಆ್ಯಂಡ್ ಫೆಸಿಲಿಟೇಶನ್ ಕ್ಯಾಂಪೇನ್

ಸವಣೂರು: ಭಾರತ ಸರಕಾರ ಯುವ ಕಾರ್ಯ ಕ್ರೀಡಾಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಇದರ ವತಿಯಿಂದ ಶ್ರೀ ಷಣ್ಮುಖ ಯುವಕ ಮಂಡಲ (ರಿ) ಸರ್ವೆ ಇದರ ಸಹಯೋಗದಲ್ಲಿ ಪರ್ಸನಲ್ ಕಾಂಟಾಕ್ಟ್ ಪ್ರೋಗ್ರಾಂ ಆ್ಯಂಡ್ ಫೆಸಿಲಿಟೇಶನ್ ಕ್ಯಾಂಪೇನ್ ಕಾರ್ಯಕ್ರಮ ಸರಕಾರಿ ಪ್ರಥಮ‌ದರ್ಜೆ ಕಾಲೇಜು ಬೆಳ್ಳಾರೆಯಲ್ಲಿ ಫೆಬ್ರವರಿ 28 ರಂದು ನಡೆಯಿತು.

ಈ‌ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಷಣ್ಮುಖ ಯುವಕ ಮಂಡಲದ ಗೌರವ ಸಲಹೆಗಾರರಾದ ಶ್ರೀ‌ ಶ್ರೀನಿವಾಸ್ ಹೆಚ್.ಬಿ. ದೀಪ ಬೆಳಗಿಸುವ ಮೂಲಕ ಉಧ್ಘಾಟಿಸಿ ಬಳಿಕ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥೆ ಸುನೀತಾ ನಾಯ್ಕ್ ಅವರು ಪ್ರಾಸ್ತಾವಿಕ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅಮೂಲ್ಯ ಸಾಕ್ಷಾರತಾ ಕೇಂದ್ರ ಸುಳ್ಯ ಇದರ ಆರ್ಥಿಕ ಸಾಕ್ಷರತಾ ಸಲಹೆಗಾರರಾಗಿರುವ ಶ್ರೀಮತಿ ಸುಜಾತರವರು ಆತ್ಮನಿರ್ಭರ ಭಾರತದ ಯೋಜನೆಯಡಿಯಲ್ಲಿ ಬರುವಂತಹ ಹಲವಾರು ಯೋಜನೆಗಳ ಸಮಗ್ರ ಮಾಹಿತಿಯನ್ನು ‌ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಘವ ಎನ್ ಇವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವೇದಿಕೆಯಲ್ಲಿ student welfare officer ಶ್ರೀ ಯತೀಶ್ ಕುಮಾರ್, ಶ್ರೀ ಷಣ್ಮುಖ ಯುವಕ ಮಂಡಲ(ರಿ) ಸರ್ವೆ ಇದರ ಅಧ್ಯಕ್ಷರು ಹಾಗೂ ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕರಾದ ಗೌತಮ್ ರಾಜ್ ಕರಂಬಾರು, ತಾಲೂಕು ಸಂಯೋಜಕಿ ಪ್ರಜ್ಞಾ ಕುಲಾಲ್ ಕಾವು ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿವೃಂದ ಹಾಗೂ ಷಣ್ಮುಖ ಯುವಕ ಮಂಡಲದ ಸದಸ್ಯರು, ಶಿಕ್ಷಕರ ವೃಂದ ಭಾಗವಹಿಸಿದರು.ಬಿ.ಕಾಂ ವಿದ್ಯಾರ್ಥಿನಿ ಕಾರ್ಯಕ್ರಮ ನಿರೂಪಿಸಿದರು.ಪ್ರಜ್ಞಾ ಕುಲಾಲ್ ಕಾವು ಸ್ವಾಗತಿಸಿದರು, ವಿದ್ಯಾರ್ಥಿಗಳು ಪ್ರಾರ್ಥಿಸಿದರು.

Leave A Reply

Your email address will not be published.