Home International ಟೀವಿ ಡಿಬೇಟ್ ಗೆ ಬನ್ನಿ ಎಂದು ಭಾರತದ ಪ್ರಧಾನಿ ಮೋದಿಗೆ ಆಹ್ವಾನ ಕೊಟ್ಟ ಪಾಕಿಸ್ತಾನ ಪ್ರಧಾನಿ...

ಟೀವಿ ಡಿಬೇಟ್ ಗೆ ಬನ್ನಿ ಎಂದು ಭಾರತದ ಪ್ರಧಾನಿ ಮೋದಿಗೆ ಆಹ್ವಾನ ಕೊಟ್ಟ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ !

Hindu neighbor gifts plot of land

Hindu neighbour gifts land to Muslim journalist

ಭಾರತ ಪಾಕಿಸ್ತಾನ ನಡುವಿನ ಭಿನ್ನಮತ ಬಗೆಹರಿಸಲು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಒಂದು ಉಪಾಯ ಹೇಳಿಕೊಟ್ಟಿದ್ದಾರೆ. ಅದೇನೆಂದರೆ ಪ್ರಧಾನಿ ನರೇಂದ್ರ ಮೋದಿ ಜೊತೆ ಟೀವಿ ಟಿಬೆಟ್!

ಉಭಯ ದೇಶಗಳ‌ ಭಿನ್ನಮತ ಬಗೆಹರಿಸಿಕೊಳ್ಳಲು ತಮ್ಮ ಜೊತೆಗೆ ಟೀವಿ ಡಿಬೆಟ್ ಗೆ ಬರಬೇಕು ಎಂದು ಇಮ್ರಾನ್ ಖಾನ್ ಆಹ್ವಾನಿಸಿದ್ದಾರೆ.

ರಷ್ಯಾಕ್ಕೆ ತೆರಳಿರುವ ಇಮ್ರಾನ್ ಖಾನ್ ಅಲ್ಲಿನ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದು, ಸಂವಾದದ ಮೂಲಕ ಭಿನ್ನಮತ ಬಗೆಹರಿಸಿದರೆ ಭಾರತ 100 ಕೋಟಿಗೂ ಹೆಚ್ಚು ಜನರಿಗೆ ಅನುಕೂಲವಾಗಲಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಭಾರತದ ಮೇಲೆ ಅಘೋಷಿತ ಯುದ್ಧ ನಡೆಸುವ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವುದನ್ನು‌ ಪಾಕಿಸ್ತಾನ ನಿಲ್ಲಿಸುವವರೆಗೆ ಆ ದೇಶದ ಜೊತೆಗೆ ದ್ವಿಪಕ್ಷೀಯ ಮಾತುಕತೆಯಾಗಲೀ ವ್ಯವಹಾರವಾಗಲೀ ಇಲ್ಲ ಎಂದು ಭಾರತ ಈಗಾಗಲೇ ತಿಳಿಸಿದೆ. ಈ ಗ ಇಮ್ರಾನ್ ಖಾನ್ ನೇರವಾಗಿ ಪ್ರಧಾನಿಯನ್ನೇ ಟೀವಿ ಟಿಬೇಟ್ ಗೆ ಆಹ್ವಾನಿಸಿರುವುದು ಕುತೂಹಲ ಮೂಡಿಸಿದೆ. ಪಾಕ್ ಹೇಳಿಕೆಗೆ ಭಾರತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.