Home latest ನಾಲ್ವರು ಪುಟ್ಟ ಮಕ್ಕಳ ಸಹಿತ ಐವರ ಬರ್ಬರ ಹತ್ಯೆಗೆ ಬೆಚ್ಚಿ ಬಿದ್ದ ಜನತೆ!! ಹಂತಕರ ಪತ್ತೆಗೆ...

ನಾಲ್ವರು ಪುಟ್ಟ ಮಕ್ಕಳ ಸಹಿತ ಐವರ ಬರ್ಬರ ಹತ್ಯೆಗೆ ಬೆಚ್ಚಿ ಬಿದ್ದ ಜನತೆ!! ಹಂತಕರ ಪತ್ತೆಗೆ ತನಿಖೆ ಚುರುಕು-ಸ್ಥಳಕ್ಕೆ ಹಿರಿಯ ಪೊಲೀಸರ ಆಗಮನ

Hindu neighbor gifts plot of land

Hindu neighbour gifts land to Muslim journalist

ರಾಜ್ಯವನ್ನೇ ಬೆಚ್ಚಿ ಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಒಂದೇ ಕುಟುಂಬದ ನಾಲ್ವರು ಮಕ್ಕಳ ಸಹಿತ ಐವರ ಬರ್ಬರ ಹತ್ಯೆಗೆ ಇಡೀ ಮಂಡ್ಯ ಜಿಲ್ಲೆಯೇ ಬೆಚ್ಚಿಬಿದ್ದಿದೆ.

ಮಂಡ್ಯ ಜಿಲ್ಲೆಯ ಕೆ.ಆರ್ ಸಾಗರ್ ಗ್ರಾಮದಲ್ಲಿ ಮನೆಯೊಳಗೇ ನಾಲ್ವರು ಮಕ್ಕಳ ಸಹಿತ ಐವರು ದುಷ್ಕರ್ಮಿಗಳ ದಾಳಿಗೆ ಪ್ರಾಣ ಚೆಲ್ಲಿದ್ದು,ಮೃತರನ್ನು ಲಕ್ಷ್ಮಿ (26), ಕೋಮಲ್ (07), ರಾಜ್(12), ಕುನಾಲ್(04), ಗೋವಿಂದ(08) ಎಂದು ಗುರುತಿಸಲಾಗಿದ್ದು ಒಂದೇ ಕುಟುಂಬದವರೆಂದು ತಿಳಿದುಬಂದಿದೆ.

ಘಟನೆಯ ಬಗ್ಗೆ ಗ್ರಾಮದೆಲ್ಲೆಡೆ ಆತಂಕ ಮನೆಮಾಡಿದ್ದು, ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಂತಕರ ಪತ್ತೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಮುಗ್ಧ ಮಕ್ಕಳ ಸಾವಿಗೆ ಗ್ರಾಮವೇ ಕಂಬನಿ ಮಿಡಿದಿದ್ದು, ಸ್ಮಶಾನ ಮೌನ ಆವರಿಸಿದೆ.