ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ನಡೆದ ಪ್ರಧಾನಿ ಮೋದಿ ದೀರ್ಘಾಯುಷ್ಯಕ್ಕಾಗಿ ಮಹಾ ಮೃತ್ಯುಂಜಯ ಯಾಗ!! ಯಾಗ ಮಾಡಿ ಹರಸಿದ ಋತ್ವಿಜರಿಗೆ ಮೋದಿ ಎಸ್ ಬಿ ಐ ಖಾತೆಯಿಂದ ದಕ್ಷಿಣೆ ಸಂದಾಯ !

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಹಾ ಮೃತ್ಯುಂಜಯ ಯಾಗ ನಡೆದಿತ್ತು. ಈ ಯಾಗ ಮಾಡಿ ಹರಸಿದ ಐವರು ಋತ್ವಿಜರಿಗೆ ದಕ್ಷಿಣೆ ಕಳುಹಿಸುವ ಮೂಲಕ ಶಾಸ್ತ್ರದ ಸಂಪ್ರದಾಯವನ್ನು ಪಾಲಿಸಿದ್ದಾರೆ ನಮ್ಮ ಪ್ರಧಾನಿ.

ಬ್ಯಾಂಕ್ ಖಾತೆ ಬಗ್ಗೆ ವಿವರ ಪಡೆದಿಕೊಂಡ ಮೋದಿ ಅವರು ಎರಡು ದಿನಗಳ ಹಿಂದೆ ಎಲ್ಲರಿಗೆ ಗುರುವಾರ ಸಂಜೆ 5.30 ರ ವೇಳೆಗೆ ಎನ್ ಡಿ ಮೋದಿ ಎಸ್ ಬಿ ಐ ಖಾತೆಯಿಂದ ಐದು ಮಂದಿ ಋತ್ವಿಜರ ಖಾತೆಗಳಿಗೆ ದಕ್ಷಿಣೆ ಸಂದಾಯ ಮಾಡಲಾಗಿತ್ತು. ದಕ್ಷಿಣೆಯನ್ನು ಖಾತೆಗೆ ಜಮೆ ಮಾಡುವ ಮೂಲಕ ಡಿಜಿಟಲ್ ಇಂಡಿ ಮಾದರಿ ಬಳಸಿದ್ದಾರೆ ಮೋದಿ.

ಪ್ರಧಾನ ಋತ್ವಿಜ ನಾಗೇಂದ್ರ ಭಾರಧ್ವಾಜ್ ಅವರು ಹೇಳುವ ಪ್ರಕಾರ, ” ಪ್ರಧಾನಿ ಮೋದಿ ಅವರಿಂದ ಬ್ರಹ್ಮಾರ್ಪಣ ಮಾಡಿಸುವುದೇ ಪುಣ್ಯದ ಕೆಲಸ. ಪ್ರಧಾನಿ ಭೇಟಿ ಸಂದರ್ಭ, ಋತಿಜ್ವರಿಗೆ ಆಸನಗಳ‌ ವ್ಯವಸ್ಥೆ ಮಾಡಲಾಗಿತ್ತು. ಆದರೆ ನಾವು ನಿಂತೇ ವಿಧಿವಿಧಾನ ಮಾಡಿದೆವು. ಎಲ್ಲಾ ವಿಧಿವಿಧಾನಗಳು ಮುಗಿದ ನಂತರ ನಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಕೇಳಿದ್ದಾರೆ. ನಾವು ಸಂಕೋಚ ವ್ಯಕ್ತಪಡಿಸಿದಾಗ, ನಮ್ಮಲ್ಲಿ ‘ ದೇನಾ ನಹಿ ಹೈ’ ಎಂದು ಹೇಳಿದರು. ಅನಂತರ ನಾವು ನಮ್ಮ‌ಬ್ಯಾಂಕ್ ಖಾತೆ ವಿವರಗಳನ್ನು ನೀಡಿದೆವು. ಇಂದು ನಮ್ಮ ಖಾತೆಗೆ ದಕ್ಷಿಣೆ‌ ಹಾಕಿದ್ದಾರೆ. ಮೋದಿ ಒಂದು ಶಕ್ತಿ, ವಿಭೂತಿ ಪುರುಷರು ಎಂದು ಪ್ರತಿಕ್ರಿಯಿಸಿದ್ದಾರೆ.

ಮೋದಿಯವರಿಗೆ ನಮ್ಮ ಮನಸ್ಸು ಅರಿಯುವ ಸಾಮರ್ಥ್ಯ ಇದೆ. ನಮ್ಮನ್ನು ವೈದಿಕ ಧಿರಿಸಿನಲ್ಲಿ ಕಂಡ ಕೂಡಲೇ ಅವರು ತಮ್ಮ ಪಾದುಕೆಗಳನ್ನು ತೆಗೆದಿರಿಸಿದರು. ಅವರಿಗೆ ಮಂತ್ರಾಕ್ಷತೆ ಹಾಕುವುದೇ ನಮ್ಮ ಪುಣ್ಯ. ಅವರ ವೈಯಕ್ತಿಕ ಖಾತೆಯಿಂದ ದಕ್ಷಿಣೆ ನಮಗೆ ಸಿಕ್ಕಿರುವುದು ನಮ್ಮ ಪುಣ್ಯ. ಅದೊಂದು ಮರೆಯಲಾಗದ ಕ್ಷಣ. ದಕ್ಷಿಣೆ ಎಷ್ಟು ನೀಡಿದರು ಎನ್ನುವುದು ಮುಖ್ಯವಲ್ಲ. ಅದನ್ನು ಹೇಳಬಾರದು ಎಂಬ ಸೂಚನೆಯೂ ಇರುವುದರಿಂದ ಹೇಳಲಾಗುವುದಿಲ್ಲ. ದಕ್ಷಿಣೆ ಒಂದು ರೂಪಾಯಿನೇ ಹಾಕಿರಲಿ ಅದು ನಮಗೆ ಬೆಲೆಕಟ್ಟಲಾಗದ್ದು ಎಂದು ಋತ್ವಿಜ ಗಣೇಶ ನಾವಡ ಹೇಳಿದ್ದಾರೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ 108 ಋತ್ವಿಜರಿಂದ ಮಹಾ ಮೃತ್ಯುಂಜಯ ಯಾಗ ನಡೆದಿತ್ತು‌ . ಪುಣ್ಯ ಕಲಶೋದಕವನ್ನು ನಾಗೇಂದ್ರ ಭಾರಧ್ವಾಜ್ ಪ್ರಧಾನಿ ಮೋದಿಯವರಿಗೆ ಪ್ರಕ್ಷೋಪಣೆ ಮಾಡಿ, ರಕ್ಷೆ ಕಟ್ಟಿ ಹರಸಿ ಬಂದಿದ್ದರು.

ಸಂಪ್ರದಾಯ ಯಾವುದಾದರೇನಂತೆ ನಮಗೆ ವೇದ, ವಿಧಿವಿಧಾನ ತಿಳಿದವರೇ ಮುಖ್ಯ ಎಂದು ಋತ್ವಿಜರ ಮಾತು.

ಪ್ರಧಾನ ಮಂತ್ರಿಗೆ ಹರಸಿ ಬಂದ ಬಗ್ಗೆ ನಾವು ಯಾರಲ್ಲಿಯೂ ಹೇಳಿದರೂ ನಂಬುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಎಲ್ಲರೂ ಸಂತೋಷ್ ಜಿ ಅವರು ಪ್ರಧಾನಿ ಅವರಿಗೆ ಪ್ರಸಾದ ಕೊಟ್ಟಿರಬಹುದು ಎಂದೇ ಮಾತನಾಡಿಕೊಳ್ಳುತ್ತಿದ್ದರು‌. ಅನಂತರ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ತಮ್ಮ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ಬಳಿಕ ಜನ ನಂಬಿದರು ‌

ಪ್ರಧಾನಿ ಮೋದಿ ಅವರಿಂದ ದಕ್ಷಿಣೆ ಪಡೆದ ಪುರೋಹಿತರು : ನಾಗೇಂದ್ರ ಭಾರಧ್ವಾಜ್ ಕಟ್ಲ ಸುರತ್ಕಲ್, ಗಣೇಶ್ ನಾವಡ ಕಾವೂರು, ವೀರವೆಂಕಟ ನರಸಿಂಹ ಹಂದೆ ಕುಂಬಳೆ, ಪ್ರಸಾದ್ ಭಟ್ ನಂದಳಿಕೆ, ಶ್ರೀ ಹರಿ ಉಪಾಧ್ಯಾಯ ವಾಮಂಜೂರು.

Leave A Reply

Your email address will not be published.