ಉಪ್ಪಿನಂಗಡಿ :KSRTC ಬಸ್ ಹಾಗೂ ಬೈಕ್ ನಡುವೆ ಅಪಘಾತ|ಬೈಕ್ ಸವಾರರಿಗೆ ಗಂಭೀರ ಗಾಯ

Share the Article

ಉಪ್ಪಿನಂಗಡಿ: ಬಸ್ ಮತ್ತು ಬೈಕ್ ನಡುವೆ
ಅಪಘಾತ ಸಂಭವಿಸಿದ ಘಟನೆ ಬೆಳ್ತಂಗಡಿ- ಉಪ್ಪಿನಂಗಡಿ ರಸ್ತೆಯ ಪೆದಮಾಲೆ ಎಂಬಲ್ಲಿ ನಡೆದಿದೆ.

ಬೈಕ್ ಸವಾರ ಮತ್ತು ಸಹ ಸವಾರ ಗಂಭೀರ ಗಾಯಗೊಂಡಿದ್ದು,ಗಾಯಾಳುಗಳನ್ನು ಟೈಲ್ಸ್ ಕೆಲಸ ನಿರ್ವಹಿಸುವ ಕಾಲು ಸಿಂಗ್ ಮತ್ತು ಮೋಹನ್ ಸಿಂಗ್
ಎನ್ನಲಾಗಿದೆ.

ಕೆ.ಎಸ್.ಆರ್.ಟಿ.ಸಿ.ಬಸ್ ಮತ್ತು ಪಲ್ಸರ್ ಬೈಕ್
ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು,ಗಾಯಾಳುಗಳನ್ನು ಪುತ್ತೂರು
ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು
ಬಂದಿದೆ.

Leave A Reply