ಪುತ್ತೂರು : ಸ್ಕೂಟರ್ -ಕಾರು ಅಪಘಾತ ,ಸ್ಕೂಟರ್ ಸವಾರರಿಗೆ ಗಾಯ

Share the Article

ಪುತ್ತೂರು: ದಾರಂದಕುಕ್ಕು ತಿರುವಿನಲ್ಲಿ ಟಿವಿಎಸ್ ಜ್ಯುಪಿಟರ್ ಸ್ಕೂಟರ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದ ಘಟನೆ ಜ.27ರಂದು ನಡೆದಿದ್ದು ಸ್ಕೂಟರ್‌ನಲ್ಲಿದ್ದ ಸವಾರೆ ಮತ್ತು ಸಹಸವಾರೆ ಗಾಯಗೊಂಡಿದ್ದಾರೆ.

ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಕಾರು ಮತ್ತು ಪುತ್ತೂರಿನಿಂದ ಉಪ್ಪಿನಂಗಡಿ ಕಡೆ ಹೋಗುತ್ತಿದ್ದ ಟಿವಿಎಸ್ ಜ್ಯುಪಿಟರ್ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಸ್ಕೂಟರ್‌ನಲ್ಲಿದ್ದ ಸವಾರೆ ಮತ್ತು ಸಹಸವಾರೆ ಗಾಯಗೊಂಡಿದ್ದಾರೆ. ಗಾಯಾಳು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಸಿರೋಡ್ ಮೂಲದವಾರದ ನವ್ಯ ಮತ್ತು ಅಭಿಲಾಷ್ ಅವರು ಶಿವಮೊಗ್ಗದಲ್ಲಿ ಕೃಷಿ ಅಧ್ಯಯನ ಮಾಡುತ್ತಿದ್ದು ವಿಟ್ಲದ ಸಿಪಿಸಿಆರ್‌ಐ ಯಲ್ಲಿ ಕೃಷಿಯ ಕುರಿತು ತರಬೇತಿ ಪಡೆದು ದಾರಂದಕುಕ್ಕುವಿನಲ್ಲಿರುವ ಸಂಬಂಧಿಕರ ಮನೆಗೆ ಸ್ಕೂಟರ್‌ನಲ್ಲಿ ಬರುತ್ತಿದ್ದ ವೇಳೆ ಈ ಅಪಘಾತ ನಡೆದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸರು ತೆರಳಿ ಮಾಹಿತಿ ಪಡೆದು ಕೊಂಡಿದ್ದಾರೆ.

Leave A Reply