ತಲೆ ಕೆಳಗಾದ ವಿಶಿಷ್ಟ ರೀತಿಯ ಮನೆ ನಿರ್ಮಾಣದ ಚಿತ್ರಣ ವೈರಲ್

Share the Article

ಇಂದಿನ ಜಗತ್ತಿನಲ್ಲಿ ಅದೆಷ್ಟೋ ವಿಭಿನ್ನತೆಗಳು ಕಾಣಸಿಗುತ್ತದೆ. ಕೆಲವೊಂದು ವಿಡಿಯೋಗಳಲ್ಲಿ ಚಿತ್ರಣಗಳಲ್ಲಿ ವಸ್ತುಗಳನ್ನೋ, ಮನುಷ್ಯ, ಮನೆಗಳನ್ನು ತಲೆ ಕೆಳಗೆ ಇರಿಸಿದಂತೆ ಇರುತ್ತದೆ. ಆದರೆ ಇಲ್ಲೊಂದು ಕಡೆ ನಿಜವಾಗಿಯೂ ತಲೆ ಕೆಳಗಾದ ಅಪರೂಪದ ಮನೆಯೊಂದನ್ನು ಕಟ್ಟಿದ್ದಾರೆ.

ಈ ತಲೆಕೆಳಗಾದ ವಿಭಿನ್ನ ಮನೆಯನ್ನು ಕೊಲಂಬಿಯಾದಲ್ಲಿ ನಿರ್ಮಿಸಿದ್ದು, ಇದೀಗ ಪ್ರವಾಸಿಗರ
ಆಕರ್ಷಣೆಯ ಕೇಂದ್ರವಾಗಿದೆ.ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋವನ್ನು ಹರಿಯಬಿಟ್ಟಿದ್ದು, ಸಖತ್ ವೈರಲ್ ಆಗುತ್ತಿದೆ.

ರಾಜಧಾನಿ ಬೊಗೋಟಾದಿಂದ ಸ್ವಲ್ಪ ದೂರದಲ್ಲಿರುವ
ಕೊಲಂಬಿಯಾದ ಗ್ವಾಟಾವಿಟಾದಲ್ಲಿ ಕೊರೊನಾ ಸಮಯದಲ್ಲಿ ಈ ತಲೆಕೆಳಗಾದ ಮನೆಯನ್ನು ಕಟ್ಟಲಾಗಿದೆ.ಈ ಮನೆಯನ್ನು ಕೊಲಂಬಿಯಾ ನಿವಾಸಿ ಆಸ್ಟ್ರಿಯನ್ ಮಾಲೀಕ ಫಿಟ್ಸ್ ಶಾಲ್ ವಿನ್ಯಾಸಗೊಳಿಸಿದ್ದು, ಮನೆಯ ಒಳಗೆ, ಪ್ರವಾಸಿಗರು
ಮಹಡಿಗಳಿರುವ ಛಾವಣಿಗಳ ಮೇಲೆ ನಡೆಯುತ್ತಾರೆ. ಆದರೆ ಸೋಫಾಗಳನ್ನು ಕೆಳಗೆ ಇರಿಸಲಾಗಿದೆ.

ಅಂತೂ ಈ ತಲೆ ಕೆಳಗಾದ ಮನೆಯನ್ನು ನೋಡೋದೇ ವಿಚಿತ್ರವಾಗಿದ್ದು,ಚಿತ್ರದಲ್ಲಿ ಮಹಡಿಗಳು ಕೆಳಗೆ ಇರುವುದನ್ನು ಗಮನಿಸಬಹುದು.ಒಟ್ಟಾರೆ ಮನೆ ಒಳಗೆ ಯಾವ ರೀತಿಲಿ ಇದೆ ಎಂಬುದು ಬಹುಶ ಅಲ್ಲಿಗೆ ಹೋಗಿ ನೋಡಬೇಕೇನು..!

Leave A Reply