ಮುಖ್ಯಮಂತ್ರಿ ಬೊಮ್ಮಾಯಿ ಭದ್ರತಾ ಸಿಬ್ಬಂದಿಯಿಂದಲೇ ಗಾಂಜಾ ಮಾರಾಟ !! | ಸಿಎಂ ನಿವಾಸದ ಬಳಿಯೇ ನಡೆಯುತ್ತಿತ್ತಂತೆ ಇವರ ಡೀಲ್ ಗಳು

Share the Article

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಅವರ ಮನೆಯ ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳು ಗಾಂಜಾ ವ್ಯಾಪಾರ ಮಾಡಿ ಸಿಕ್ಕಿಬಿದ್ದ ಘಟನೆ ನಡೆದಿದೆ.

ಡ್ರಗ್ ಪೆಡ್ಲರ್‌ಗಳಿಂದ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದ ಇಬ್ಬರು ಪೊಲೀಸ್ ಕಾನ್ ಸ್ಟೇಬಲ್‌ಗಳನ್ನು ಬಂಧಿಸಲಾಗಿದೆ. ಮುಖ್ಯಮಂತ್ರಿಗಳ ಮನೆ ಇರುವ ಆರ್.ಟಿ. ನಗರದ ಬಳಿಯೇ ಇವರ ಡೀಲ್ ನಡೆಯುತ್ತಿತ್ತು!!

ಶಿವಕುಮಾರ್ ಹಾಗೂ ಸಂತೋಷ್ ಎಂಬ ಪೇದೆಗಳ ಗಾಂಜಾ ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾರೆ. ಇವರು, ಗಾಂಜಾ ಪೆಡ್ಲರ್‌ಗಳ ಮೂಲಕ ಗಾಂಜಾ ತರಿಸಿಕೊಂಡ ಮಾರಾಟಕ್ಕೆ ಮಾಡುತ್ತಿದ್ದರು. ಇವರು ಮೋಸ್ಟ್ ವಾಂಟೆಡ್ ಪೆಡ್ಲರ್‌ಗಳಾದ ಅಖಿಲ್ ರಾಜ್ ಹಾಗೂ ಅಮ್ಮದ್ ಖಾನ್ ಬಳಿ ಗಾಂಜಾ ಖರೀದಿಸಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಇವರು, ಈ ಮೊದಲು ಡ್ರಗ್ ಪೆಡ್ಲರ್‌ಗಳ ಜೊತೆ ಸಂಪರ್ಕ ಹೊಂದಿದ್ದರು. ಆ ಸಮಯದಲ್ಲಿ ಮಾದಕ ವಸ್ತು ತರಿಸಿ ಮಾರಾಟ ಮಾಡುತ್ತಿದ್ದರು. ಒಮ್ಮೆ ಸಿಸಿಬಿ ಪೊಲೀಸರ ಕೈಗೂ ಸಿಕ್ಕಿಬಿದ್ದಿದ್ದರು ಎಂದು ತಿಳಿದುಬಂದಿದೆ.

Leave A Reply