86 ವರ್ಷಗಳ ಸುದೀರ್ಘ ಶಿಕ್ಷೆಗೆ ಗುರಿಯಾದ ಪಾಕಿಸ್ತಾನದ ಪ್ರಸಿದ್ದ ನರ ವಿಜ್ಞಾನಿ
ಅದು 2001,ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಪಡೆದ ಆಮೆರಿಕ ಅಕ್ಷರಶಃ ನಲುಗಿ ಹೋಗಿತ್ತು. ಅಲ್ಲಿನ ವಿಶ್ವ ವಾಣಿಜ್ಯ ಕಚೇರಿ ಮತ್ತು ಪೆಂಟಗಾನ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ಭಯಾನಕ ಕೃತ್ಯದ ಹಿಂದಿನ ಸಂಚು ಬಯಲಾದಾಗ ಖುದ್ದು ಆಮೆರಿಕ ಹೌಹಾರಿಹೋಗಿತ್ತು.
ಏಕೆಂದರೆ ಇದರ ಹಿಂದೆ ಇದ್ದ ಮಹಾನ್ ತಲೆ 29 ವರ್ಷದ ಓರ್ವ ಯುವತಿಯದ್ದಾಗಿತ್ತು. ಈಕೆ ಹೆಸರು ಆಫಿಯಾ ಸಿದ್ದಿಕಿ ಪಾಕಿಸ್ತಾನ ಮೂಲದ ಪ್ರಸಿದ್ಧ ನರವಿಜ್ಞಾನಿ ಇವಳು.
2008ರಲ್ಲಿ ಆಫ್ಘಾನಿಸ್ತಾನದಲ್ಲಿ ಇವಳನ್ನು ಬಂಧಿಸಲಾಗಿತ್ತು. ಪಾಕಿಸ್ತಾನದ ಅಲ್ ಕೈದಾ ಸಂಘಟನೆಯ ಜತೆ ಇವಳಿಗೆ ನೇರ ಸಂಪರ್ಕ ಇರುವುದು ತಿಳಿದುಬಂದಿತ್ತು. ಸುದೀರ್ಘ ವಿಚಾರಣೆ ನಡೆದು 2010ರಲ್ಲಿ ಅಮೆರಿಕ ಕೋರ್ಟ್ ಅಫಿಯಾಗೆ 86 ವರ್ಷಗಳ ಸುದೀರ್ಘ ಶಿಕ್ಷೆ ವಿಧಿಸಿದೆ.
ಸದ್ಯ ಟೆಕ್ಸಾಸ್‌ನ ಫೋರ್ಟ್‌ವರ್ತ್‌ನಲ್ಲಿರುವ ಫೆಡರಲ್ ಜೈಲಿನಲ್ಲಿ ಈಕೆ ಬಂಧನದಲ್ಲಿದ್ದಾಳೆ, ಮೊದಲು ಪಾಕಿಸ್ತಾನದಲ್ಲಿ ಈಕೆಯ ಪರವಾಗಿ ಬಿಸಿಯಾಗಿದ್ದ ಹೋರಾಟ ಕ್ರಮೇಣ ತಣ್ಣಗಾಗುತ್ತಾ ಬಂದಿತ್ತು.
ಆದರೆ ಇದೀಗ ಮತ್ತೆ ಈಕೆಯ ಬಿಡುಗಡೆಗೆ ಒತ್ತಾಯ ಮಾಡಿ ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿದೆ. ಈಕೆಗೆ ಈಗ 49 ವರ್ಷ ವಯಸ್ಸು.