Home Interesting ನಿರ್ಗತಿಕ ವ್ಯಕ್ತಿಯ ದುಃಖ ಅರಿತು ಆತನನ್ನು ತಬ್ಬಿಕೊಂಡ ನಾಯಿ | ಶ್ವಾನದ ಆ ಅಪ್ಪುಗೆಯಲ್ಲಿ ಅಡಗಿತ್ತು...

ನಿರ್ಗತಿಕ ವ್ಯಕ್ತಿಯ ದುಃಖ ಅರಿತು ಆತನನ್ನು ತಬ್ಬಿಕೊಂಡ ನಾಯಿ | ಶ್ವಾನದ ಆ ಅಪ್ಪುಗೆಯಲ್ಲಿ ಅಡಗಿತ್ತು ಅದೆಷ್ಟೋ ಸಮಾಧಾನದ ಮಾತುಗಳು | ಈ ಹೃದಯಸ್ಪರ್ಶಿ ವೀಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಈ ಜಗತ್ತಿನಲ್ಲಿ ಅನೇಕ ಜನರಿಗೆ ಸ್ವಂತ ಸೂರೇ ಇಲ್ಲ. ಇದಲ್ಲದೇ ಲೋಕದಲ್ಲಿ ಅಲೆಮಾರಿ ಜೀವನ ನಡೆಸುವವರು ಅನೇಕರಿದ್ದಾರೆ. ಅವರಿಗೆ ಬಹಳಷ್ಟು ದುಃಖಗಳಿವೆ, ಆದರೆ ಆ ದುಃಖವನ್ನು ಹಂಚಿಕೊಳ್ಳುವ ವ್ಯಕ್ತಿ ಸಿಕ್ಕಾಗ ಈ ದುಃಖ ಕಡಿಮೆ ಎನಿಸುತ್ತದೆ. ಅದು ಮನುಷ್ಯರೇ ಆಗಿರಲಿ ಅಥವಾ ಪ್ರಾಣಿಯೇ ಆಗಿರಲಿ ನೋವು ಕೇಳುವ ಮನಸ್ಸೊಂದು ಬೇಕೆ ಬೇಕು.

ದುಃಖತಪ್ತ ವ್ಯಕ್ತಿಗೆ ಮುಗ್ಧ ಮನಸ್ಸೊಂದು ಮಿಡಿಯುವ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿ ನೀವು ಭಾವುಕರಾಗುವುದು ಖಚಿತ. ಈ ವಿಡಿಯೋದಲ್ಲಿ, ನಾಯಿಯೊಂದು ನಿರ್ಗತಿಕ ವ್ಯಕ್ತಿಯನ್ನು ತಬ್ಬಿಕೊಂಡು ಬೆಂಬಲ ನೀಡುತ್ತಿದೆ. ಈ ವೀಡಿಯೋ ಮೂಲಕ ಈ ಶ್ವಾನ ಜನರ ಹೃದಯದಲ್ಲಿ ವಿಶೇಷ ಸ್ಥಾನ ಗಳಿಸಿದೆ.

ಈ ವೀಡಿಯೋ ಮೂಲಕ ನಾಯಿಗಳು ಮನುಷ್ಯನ ಆತ್ಮೀಯ ಗೆಳೆಯ ಎಂಬ ಮಾತು ಸತ್ಯವಾಗಿದೆ. @buitengebieden_ ಹೆಸರಿನ ಖಾತೆಯ ಟ್ವಿಟರ್‌ನಲ್ಲಿ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಮೊದಲನೆಯದಾಗಿ, ಈ ವೀಡಿಯೋದಲ್ಲಿ ನಿರ್ಗತಿಕ ವ್ಯಕ್ತಿಯೊಬ್ಬರು ದುಃಖದಲ್ಲಿ ಕುಳಿತಿದ್ದಾರೆ. ಅದೇ ಸಮಯದಲ್ಲಿ, ಆ ವ್ಯಕ್ತಿಯ ಬಳಿ ಶ್ವಾನವೊಂದು ಬರುತ್ತದೆ. ಈ ನಾಯಿ ಆ ವ್ಯಕ್ತಿಯನ್ನು ನೋಡುತ್ತದೆ.

https://twitter.com/buitengebieden_/status/1476544786333065219?s=20

ಸ್ವಲ್ಪ ಸಮಯದ ನಂತರ ಆ ನಾಯಿ ವ್ಯಕ್ತಿಯನ್ನು ತಬ್ಬಿಕೊಳ್ಳುವುದನ್ನು ವೀಡಿಯೋದಲ್ಲಿ ಕಾಣಬಹುದು. ನಾಯಿಯು ವ್ಯಕ್ತಿಯ ಸಮಸ್ಯೆಯನ್ನು ಅರ್ಥಮಾಡಿಕೊಂಡಿದೆ ಮತ್ತು ಅವನನ್ನು ಅಪ್ಪಿಕೊಂಡು ತನ್ನ ದುಃಖವನ್ನು ಹಂಚಿಕೊಳ್ಳಲು ಬಯಸುತ್ತದೆ ಎಂದು ಇದರಿಂದ ಊಹಿಸಬಹುದು. ಆತನಿಗೆ ಯಾವುದೇ ಮನುಷ್ಯ ನೀಡದ ಸಮಾಧಾನವನ್ನು ನಾಯಿ ತನ್ನ ಒಂದು ಅಪ್ಪುಗೆಯಲ್ಲೇ ಸಾರಿ ಹೇಳುತ್ತಿರುವ ವೀಡಿಯೋ ಹೃದಯಸ್ಪರ್ಶಿಯಾಗಿದೆ.

ಈ ವೀಡಿಯೋ ನೋಡಿದ ಹಲವು ಬಳಕೆದಾರರು ನಾಯಿಯನ್ನು ಶ್ಲಾಘಿಸಿದ್ದಾರೆ. ಈ ವೀಡಿಯೋ ಇದುವರೆಗೆ ಸುಮಾರು 7 ಲಕ್ಷ ವೀಕ್ಷಣೆ ಪಡೆದಿದ್ದು, ಸುಮಾರು 50 ಸಾವಿರ ಮಂದಿ ವೀಡಿಯೋವನ್ನು ಲೈಕ್ ಮಾಡಿದ್ದಾರೆ.