ದೇವರ ಮುಂದೆ ಹಚ್ಚಿಟ್ಟಿದ್ದ ದೀಪ ಇಡೀ ಮನೆಯನ್ನೇ ಸುಟ್ಟು ಭಸ್ಮ ಮಾಡಿತು !! | ಮೂರುವರೆ ಲಕ್ಷ ಹಣದ ಜೊತೆಗೆ ಚಿನ್ನಾಭರಣವೂ ಬೆಂಕಿಗಾಹುತಿ

Share the Article

ಹಿಂದೂ ಮನೆಗಳಲ್ಲಿ ದೇವರಿಗೆ ದೀಪ ಹಚ್ಚುವುದು ಪದ್ಧತಿ. ಆದರೆ ಆ ದೀಪವೇ ಇಲ್ಲೊಂದು ಕಡೆ ಇಡೀ ಮನೆಯೇ ಹೊತ್ತಿ ಉರಿಯುವಂತೆ ಮಾಡಿದೆ. ಹೌದು, ದೇವರ ಮುಂದೆ ಹಚ್ಚಿಟ್ಟಿದ್ದ ದೀಪದಿಂದ ಬೆಂಕಿ ಹೊತ್ತಿಕೊಂಡು ಗುಡಿಸಲಿನಲ್ಲಿದ್ದ ಚಿನ್ನಾಭರಣಗಳು ಸೇರಿ ವಸ್ತುಗಳು ಸುಟ್ಟು ಕರಕಲಾದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಬಡಮಲ್ಲಿ ತಾಂಡಾದಲ್ಲಿ ನಡೆದಿದೆ.

ಗ್ರಾಮದ ಅಂಗನವಾಡಿ ಸಹಾಯಕಿಯಾದ ವಿನೋದಾ ಎಂಬುವರು ಗುಡಿಸಲಿನಲ್ಲಿ ವಾಸಿಸುತ್ತಿದ್ದು, ದೇವರ ಮುಂದೆ ದೀಪ ಹಚ್ಚಿಟ್ಟು ಅಂಗನವಾಡಿಗೆ ಕೆಲಸಕ್ಕೆ ಹೋಗಿದ್ದರು. ಕೆಲ ಹೊತ್ತಿನಲ್ಲಿ ದೀಪದ ಬೆಂಕಿ ಗುಡಿಸಲಿಗೆ ಆವರಿಸಿ ಗುಡಿಸಲಿನಲ್ಲಿದ್ದ ಮೂರು ಲಕ್ಷ ನಗದು ಹಣ ಮತ್ತು ಐವತ್ತು ಗ್ರಾಂ ತೂಕದ ಚಿನ್ನಾಭರಣ ಬೆಂಕಿಗೆ ಆಹುತಿಯಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸ ಮನೆಯ ನಿರ್ಮಾಣಕ್ಕಾಗಿ ಮನೆಯಲ್ಲಿ ಹಣವನ್ನು ಕೂಡಿ ಇಟ್ಟಿದ್ದರು. ಅದರೆ ಬೆಂಕಿಗೆ ಮನೆಯಲ್ಲಿ ಇದ್ದ ನಗದು ಕೂಡ ಸುಟ್ಟು ಇಡೀ ಕುಟುಂಬವೇ ಕಣ್ಣೀರು ಹಾಕುತ್ತಿದೆ.

ಸ್ಥಳಕ್ಕೆ ಕಾಗಿನೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply