ಮಾ.19ರಂದು ನಡೆಯಲಿದ್ದ ಶ್ರೀ ಕ್ಷೇತ್ರ ಬರೆಪ್ಪಾಡಿಯ ಅಷ್ಟಮಂಗಲ ಚಿಂತನೆ ಮುಂದೂಡಿಕೆ



ಬೆಳಂದೂರು :  ಕುದ್ಮಾರು ಗ್ರಾಮದಲ್ಲಿರುವ  ಸುಮಾರು 2000 ವರ್ಷಗಳ ಇತಿಹಾಸ ಹೊಂದಿರುವ ಪಾಂಡವ ಪ್ರತಿಷ್ಟೆಯ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡುವ ನಿಟ್ಟಿನಲ್ಲಿ ಮಾ.19ರಂದು ಅಷ್ಟಮಂಗಲ ಚಿಂತನೆಯನ್ನು ನಿಗದಿ ಮಾಡಲಾಗಿತ್ತು.

ಇದೀಗ ಜಿಲ್ಲಾಡಳಿತದ ಆದೇಶದಂತೆ ಪ್ರಶ್ನಾ ಚಿಂತನೆಯನ್ನು ಮುಂದೂಡಲಾಗಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

Leave A Reply

Your email address will not be published.