ಕಡಬ : ರಬ್ಬರ್ ಟ್ಯಾಪರ್‌ಗೆ ಚೂರಿ ಇರಿತದಿಂದ ಗಂಭೀರ ಗಾಯ,ಆರೋಪಿ ವಶಕ್ಕೆ

Share the Article

ಪುತ್ತೂರು: ಕಡಬ ಮರ್ದಾಳದಲ್ಲಿ ಚೂರಿ ಇರಿತ ಗೊಂಡು ರಬ್ಬರ್ ಟ್ಯಾಪರ್ ತೀವ್ರ ಗಾಯಗೊಂಡ ಘಟನೆ ಡಿ.28 ರ ತಡರಾತ್ರಿ ನಡೆದ ಬಗ್ಗೆ ವರದಿಯಾಗಿದೆ.

ಕೇರಳ ಮೂಲದವರಾಗಿದ್ದು ಮರ್ದಾಳದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ನಿರ್ವಹಿಸುತ್ತಿರುವ ಪ್ರಸಾದ್(57ವ) ಎಂಬವರು ಚೂರಿ ಇರಿತಕೊಳಗಾದವರು.

ಪ್ರಸಾದ್ ಅವರಿಗೆ ಸ್ಥಳೀಯ ಇನ್ನೋರ್ವ ರಬ್ಬರ್ ಟ್ಯಾಪರ್ ಶಿವಪ್ರಸಾದ್ ಅವರು ಚೂರಿಯಿಂದ ತಿವಿದ್ದಿದ್ದಾರೆ.

ಆರೋಪಿ ಶಿವಪ್ರಸಾದ್ ಅವರನ್ನು ಕಡಬ ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ.

Leave A Reply