Home News ಉಡುಪಿ ಇಂಡಿಗೋ ವಿಮಾನದಲ್ಲಿ ತುಳುವಿನಲ್ಲಿ ಅನೌನ್ಸ್ ಮೆಂಟ್ ಮಾಡಿ ಕರಾವಳಿಗರ ಮನಗೆದ್ದ ಪೈಲೆಟ್ !!|  “ಮಾತೆರೆಗ್ಲಾ ಸೊಲ್ಮೆಲು”...


ಇಂಡಿಗೋ ವಿಮಾನದಲ್ಲಿ ತುಳುವಿನಲ್ಲಿ ಅನೌನ್ಸ್ ಮೆಂಟ್ ಮಾಡಿ ಕರಾವಳಿಗರ ಮನಗೆದ್ದ ಪೈಲೆಟ್ !!|  “ಮಾತೆರೆಗ್ಲಾ ಸೊಲ್ಮೆಲು” ಎಂದು ಮಾತು ಆರಂಭ ಮಾಡಿದ ವೀಡಿಯೋದ ತುಣುಕು ಕರಾವಳಿಯಲ್ಲಿ ಫುಲ್ ವೈರಲ್

Hindu neighbor gifts plot of land

Hindu neighbour gifts land to Muslim journalist

ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆ ಕರಾವಳಿಯ ಮಾತೃಭಾಷೆ. ತುಳು ಭಾಷೆಗೆ ಅದರದ್ದೇ ಆದ ವೈಶಿಷ್ಟ್ಯವಿದೆ. ತುಳು ಭಾಷೆ ಎಂಥವರನ್ನಾದರೂ ಮೆಚ್ಚಿಸುವಂತದ್ದು ಹಾಗೆಯೇ ಆಕರ್ಷಿಸುವಂತದ್ದು ಕೂಡ. ಅದಕ್ಕೆ ತಾಜಾ ಉದಾಹರಣೆಯಂತಿದೆ ಈ ಘಟನೆ. ವಿಮಾನದ ಪೈಲಟ್ ಒಬ್ಬ ತುಳುವಿನಲ್ಲಿ ಅನೌನ್ಸ್ ಮೆಂಟ್ ಕೊಟ್ಟು ಹೈಫೈ ಇಂಗ್ಲಿಷ್ ಪ್ರಿಯರ ಮಧ್ಯೆ ವಿಭಿನ್ನ ಆಕರ್ಷಣೆಗೆ ಕಾರಣವಾಗಿರುವ ವೀಡಿಯೋ ಇದೀಗ ಕರಾವಳಿಯಲ್ಲಿ ಫುಲ್ ವೈರಲ್ ಆಗಿದೆ.

ಉಡುಪಿ ಮೂಲದ ಪ್ರದೀಪ್ ಪದ್ಮಶಾಲಿ ಇಂಡಿಗೋ ವಿಮಾನದಲ್ಲಿ ಪೈಲಟ್ ಆಗಿದ್ದು, ಶುಕ್ರವಾರ ರಾತ್ರಿ ಎಂಟು ಗಂಟೆಗೆ ಮುಂಬೈನಿಂದ ಮಂಗಳೂರಿಗೆ ವಿಮಾನ ಹೊರಡುವಾಗ ಇಂಗ್ಲಿಷ್ ಬದಲಿಗೆ ತುಳುವಿನಲ್ಲಿ ಅನೌನ್ಸ್ ಮೆಂಟ್ ಕೊಟ್ಟಿದ್ದಾರೆ.

ದೇಶೀಯ ವಿಮಾನದಲ್ಲಿ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ ವಿಮಾನ ಹೊರಡುವಾಗ ಮತ್ತು ಇಳಿಯುವಾಗ ಪ್ರಯಾಣಿಕರಿಗೆ ಸೂಚನೆ ರವಾನಿಸುವ ಪದ್ಧತಿ ಇದೆ. ಆದರೆ, ಕರಾವಳಿ ಕರ್ನಾಟಕದ ಜನರ ಸ್ಥಳೀಯ ಭಾಷೆ ಎನ್ನುವ ನೆಲೆಯಲ್ಲಿ ಮುಂಬೈನಿಂದ ಮಂಗಳೂರಿಗೆ ಬರುವ ವಿಮಾನದಲ್ಲಿ ಕರಾವಳಿ ಜನರೇ ಹೆಚ್ಚಿರುವುದರಿಂದ ಪೈಲಟ್ ಈ ಬಗ್ಗೆ ಹಿರಿಯಧಿಕಾರಿಗಳ ಅನುಮತಿ ಪಡೆದು ತುಳು ಭಾಷೆಯಲ್ಲಿ ಸೂಚನೆ ನೀಡಿದ್ದಾರೆ.

ಇಂಡಿಗೋ ವಿಮಾನ ಪ್ರತಿ ದಿನವೂ ಎಂಟು ಗಂಟೆಗೆ ಮುಂಬೈನಿಂದ ಹೊರಟು ರಾತ್ರಿ 9.30ಕ್ಕೆ ಮಂಗಳೂರು ತಲುಪುತ್ತದೆ. ಇದರಲ್ಲಿ ಪ್ರದೀಪ್ ಪೈಲಟ್ ಆಗಿದ್ದು ತಾನೊಬ್ಬ ತುಳುವ ಅನ್ನುವ ಅಭಿಮಾನದಿಂದ ಇಂಗ್ಲಿಷ್ ಭಾಷೆಯಲ್ಲಿರುವ ಸೂಚನೆಯನ್ನು ತುಳುವಿನಲ್ಲಿ ಬರೆದು ಓದಿದ್ದಾರೆ.

ಅಂದಹಾಗೆ ಪ್ರದೀಪ್ ಉಡುಪಿ ಮೂಲದ ಕುಟುಂಬದವರಾಗಿದ್ದು ಮುಂಬೈನಲ್ಲಿಯೇ ಬೆಳೆದು ಕಲಿತು ಪೈಲಟ್ ಉದ್ಯೋಗಕ್ಕೆ ಸೇರಿದ್ದಾರೆ. ಮಾತೆರೆಗ್ಲಾ ಸೋಲ್ಮೆಲು ಎನ್ನುತ್ತಾ ತುಳುವಿನಲ್ಲಿ ಅನೌನ್ಸ್ ಮೆಂಟ್ ಪ್ರಾರಂಭ ಮಾಡಿರುವ ಈ 45 ಸೆಕಂಡಿನ ವೀಡಿಯೋ ಕರಾವಳಿಯಲ್ಲಿ ವೈರಲ್ ಆಗಿದೆ. ಹೆಚ್ಚಿನವರು ತಮ್ಮ ವಾಟ್ಸಪ್ ಸ್ಟೇಟಸ್ ಹಾಕಿ ಅಭಿಮಾನ ಮೆರೆದಿದ್ದಾರೆ.