ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಜಾತ್ರೋತ್ಸವ ಸಂಪನ್ನ
ನರಿಮೊಗರು :ರಾಜ್ಯ ಮುಜರಾಯಿ ಇಲಾಖೆಗೆ ಒಳಪಟ್ಟ ಏಕೈಕ ಮೃತ್ಯುಂಜಯ ದೇವಸ್ಥಾನವಾಗಿರುವ ಮುಂಡೂರು ಗ್ರಾಮದ ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಮಾ.15ರಿಂದ ಮಾ.16 ರ ತನಕ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.
ಮಾ.15 ರಂದು ಬೆಳಗ್ಗೆ 8ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ಥಿ ಪುಣ್ಯಹವಾಚನ, ಶ್ರೀ ಮಹಾಗಣಪತಿ ಹೋಮ, ಶ್ರೀ ಮಹಾ ಮೃತ್ಯುಂಜಯ ಹೋಮ, ಹಾಗೂ ಬೆಳಗ್ಗೆ 11.30 ಕ್ಕೆ ಶ್ರೀ ಮಹಾಮೃತ್ಯುಂಜಯ ಹೋಮದ ಪೂರ್ಣಾಹುತಿ ನಡೆಯಿತು.
ರಾತ್ರಿ ಮಹಾಪೂಜೆ,ಅನ್ನಸಂತರ್ಪಣೆ ಬಳಿಕ ಶ್ರೀದೇವರ ಬಲಿ ಹೊರಟು ಉತ್ಸವ ,ಸುಡುಮದ್ದು ಪ್ರದರ್ಶನ,ವಸಂತ ಕಟ್ಟೆ ಪೂಜೆ ನಡೆಯಿತು.
ಮಾ.16ರಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಕಲಶ ಪೂಜೆ, ನಂತರ ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಬಟ್ಟಲು ಕಾಣಿಕೆ, ವೈದಿಕ ಮಂತ್ರಾಕ್ಷತೆ , ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆ,ಪಿಲಿಚಾಮುಂಡಿ ದೈವದ ನೇಮೋತ್ಸವ ನಡೆಯಿತು. ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಟಿ.ಮಹೇಶ್ಚಂದ್ರ ಸಾಲಿಯಾನ್ ನಡುಬೈಲುಗುತ್ತು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸುಂದರ ಗೌಡ ನಡುಬೈಲು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಮೇಶ್ ಬೈಪಡಿತ್ತಾಯ, ಶಕುಂತಳಾ ನೀಲಪ್ಪ ಪೂಜಾರಿ, ಗಣೇಶ್ ನಾಯ್ಕ ಕೋಡಿಬೈಲು, ಸೀತಾರಾಮ ಗೌಡ ಮುಂಡತ್ತೋಡಿ, ಜನಾರ್ದನ ಜೋಯಿಷ, ಜಯಾನಂದ ಆಳ್ವ, ಪ್ರಕಾಶ್ ಪುರುಷರಕಟ್ಟೆ, ಜಾತ್ರೋತ್ಸವ ಸಮಿತಿ ಉಪಾಧ್ಯಕ್ಷರಾದ ನಾಗೇಶ್ ನಾಕ್, ಸದಸ್ಯರಾದ ಕೊರಗಪ್ಪ ನಾಯ್ಕ, ವಸಂತ ಗೌಡ, ತಿಮ್ಮಪ್ಪ ಗೌಡ, ಬಾಲಚಂದ್ರ ಗೌಡ, ರಾಮಣ್ಣ ರೈ, ಜಯಶ್ರೀ, ಬಾಲಕೃಷ್ಣ ರೈ, ಅನಿಲ್ ಕುಮಾರ್, ಜಯರಾಮ ಪೂಜಾರಿ, ಕೋಶಾಧಿಕಾರಿ ಚಂದ್ರಶೇಖರ ಕುರೆಮಜಲು ಮೊದಲಾದವರು ಉಪಸ್ಥಿತರಿದ್ದರು.