ಕುದ್ಮಾರು : ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ | ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ

ಸವಣೂರು : ಕುದ್ಮಾರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಯು ಸಂಘದ ಕಛೇರಿಯಲ್ಲಿ ಮಾ.16ರಂದು ನಡೆಯಿತು.

ಜಿಲ್ಲಾ ಸಹಕಾರ ಸಂಘಗಳ ಹಿರಿಯ ಉಪನಿರೀಕ್ಷಕರಾದ ಶಿವಲಿಂಗಯ್ಯ ಅವರು ಚುನಾವಣಾಽಕಾರಿಯಾಗಿದ್ದರು. ನೂತನ ಅಧ್ಯಕ್ಷರಾಗಿ ಪವಿತ್ರಾ ಚೆನ್ನಪ್ಪ ಗೌಡ ನೂಜಿ ,ಉಪಾಧ್ಯಕ್ಷರಾಗಿ ಗೌರಿ ಸಂಜೀವ ನಾಯ್ಕ ಕಾರ್ಲಾಡಿ ಅವಿರೋಧವಾಗಿ ಆಯ್ಕೆಯಾದರು.

ನಿರ್ಗಮನ ಅಧ್ಯಕ್ಷೆ,ಹಾಲಿ ನಿರ್ದೇಶಕಿ ಶಶಿಕಲಾ ಲೋಕನಾಥ್ ಮಾತನಾಡಿ,ಕಳೆದ 5 ವರ್ಷಗಳ ಆಡಳಿತದಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆಗಳು,ಮುಂದಿನ ಆಡಳಿತ ಮಂಡಳಿಗೂ ಸಂಪೂರ್ಣ ಸಹಕಾರ ನೀಡಲಾಗುವುದು..ಚುನಾವಣೆ ನಡೆಯಬಾರದೆಂಬ ನಿಟ್ಟಿನಲ್ಲಿ ಅವಿರೋಧ ಆಯ್ಕೆ ನಡೆದಿದೆ.ಚುನಾವಣೆ ದಿನದ 2 ದಿನದ ಮೊದಲು ಅರ್ಹ ಸದಸ್ಯರ ಪಟ್ಟಿ ದೊರಕಿದೆ.ಇದಕ್ಕೆ ಯಾರೂ ಹೊಣೆ ಎಂದರು. ಸಹಕಾರ ಸಂಘದ ವಿಚಾರದಲ್ಲಿ ಗೌಪ್ಯತೆ ಇರಬಾರದು ಆದರೂ ಕೆಲ ಬೆಳವಣಿಗೆಗಳು ಬೇಸರ ತರಿಸಿದೆ ಎಂದರು.

ನೂತನ ಅಧ್ಯಕ್ಷೆ ಪವಿತ್ರಾ ಚೆನ್ನಪ್ಪ ಗೌಡ ನೂಜಿ ಮಾತನಾಡಿ,ಸಂಘದ ಅಧ್ಯಕ್ಷತೆಗೆ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.ಸಂಘದ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡಬೇಕು.ಸಂಘದ ಅಭಿವೃದ್ಧಿ ಹಿನ್ನೆಲೆಯಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದರು.

ಪವಿತ್ರಾ ಚೆನ್ನಪ್ಪ ಗೌಡ ನೂಜಿ

ನೂತನ ಉಪಾಧ್ಯಕ್ಷೆ ಗೌರಿ ಸಂಜೀವ ಮಾತನಾಡಿ,ಎಲ್ಲರ ಸಹಕಾರ ಯಾಚಿಸಿದರು.ಚುನಾವಣಾಧಿಕಾರಿ ಶಿವಲಿಂಗಯ್ಯ ಅವರು ಆಯ್ಕೆಯಾದವರಿಗೆ ಪ್ರಮಾಣ ಪತ್ರ ನೀಡಿದರು.

ಗೌರಿ ಸಂಜೀವ

ಈ ಸಂದರ್ಭ ಸಂಘದ ನಿರ್ದೇಶಕರಾದ ಶಶಿಕಲಾ ಲೋಕನಾಥ್, ಕುಸುಮಾವತಿ ಅಚ್ಚುತ ಗೌಡ ಕಂಪ,ಪುಷ್ಪಾವತಿ ಶೀನಪ್ಪ ಗೌಡ ಖಂಡಿಗ,ಪ್ರೇಮಾ ರಾಘವ ಗೌಡ ಏರ್ಕಮೆ,ಸರಸ್ವತಿ ವಸಂತ ಗೌಡ ಏರ್ಕಮೆ,ವನಜಾ ವಿನಯ ಕುಮಾರ್ ಕೆರೆನಾರು,ವಾರಿಜ ಐತ್ತಪ್ಪ ಗೌಡ ಕೂಂಕ್ಯ,ಸುಧಾ ವಸಂತ ಗೌಡ ಕೂಂಕ್ಯ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಶೇಷಮ್ಮ ಸಹಕರಿಸಿದರು.

Leave A Reply

Your email address will not be published.