ಸರ್ವೆ ಶ್ರೀ ಸಂತಾನ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕಲಶಾಭಿಷೇಕ,ಕಣ್ತುಂಬಿಕೊಂಡ ಸಹಸ್ರಾರು ಭಕ್ತರು | ಇಂದು ರಾತ್ರಿ ಆಕರ್ಷಕ ಸುಡುಮದ್ದುಗಳ ಪ್ರದರ್ಶನ ಸರ್ವೆ ಬೆಡಿ

Share the Article

ಪುತ್ತೂರು : ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಪುನಃ ನಿರ್ಮಾಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿದ್ದು,ಡಿ.26ರಂದು ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ‌ ವೇ.ಮೂ.ಬ್ರಹ್ಮ ಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಅವರ ನೇತೃತ್ವದಲ್ಲಿ ನಡೆಯಿತು.

ಬ್ರಹ್ಮಕಲಶದ ಪುಣ್ಯ ದಿನವಾದ ಆದಿತ್ಯವಾರ ದೇವಸ್ಥಾನವನ್ನು ವಿಶೇಷವಾಗಿ ಹೂವಿನಿಂದ ಅಲಂಕಾರ ಮಾಡಲಾಗಿತ್ತು..ಸಂತಾನ ಶ್ರೀ ಸುಬ್ರಹ್ಮಣ್ಯ್ಯೇಶ್ವರ ದೇವರೆಂದೆ ಪ್ರಸಿದ್ದಿ ಪಡೆದಿರುವ ,ಬೇಡಿದವರಿಗೆ ಮಾಂಗಲ್ಯ ಭಾಗ್ಯ,ಸಂತಾನ ಭಾಗ್ಯ ಕರುಣಿಸುವ ಸುಬ್ರಹ್ಮಣ್ಯನ ಬ್ರಹ್ಮಕಲಶವನ್ನು ಕಣ್ತುಂಬಿಸಿಕೊಳ್ಳಲು ಸಹಸ್ರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.

ಬೆಳಗ್ಗೆ 7ಕ್ಕೆ ಗಣಪತಿ ಹೋಮ, 10 ಗಂಟೆಗೆ ರತ್ನನ್ಯಾಸಾದಿ ಪೀಠ ಪ್ರತಿಷ್ಠೆ ಬಳಿಕ ದೇವರ ಪುನಃಪ್ರತಿಷ್ಠೆ, ಅಷ್ಟಬಂಧ ಕ್ರಿಯೆ, ಬ್ರಹ್ಮಕಲಶಾಭಿಷೇಕ ನಡೆಯಿತು.ಮಧ್ಯಾಹ್ನ ಸಾವಿರಾರು ಜನರು ಅನ್ನಪ್ರಸಾದ ಸ್ವೀಕರಿಸಿದರು.

ಆದಿತ್ಯವಾರ ರಾತ್ರಿ ದೇವರ ಉತ್ಸವ ನಡೆಯಲಿದ್ದು, ರಾತ್ರಿ ಬೆಡಿ ಸೇವೆ ಆಕರ್ಷಕ ಸಿಡಿಮದ್ದುಗಳ ಪ್ರದರ್ಶನ
ರಾತ್ರಿ ಗಂಟೆ ಒಂಬತ್ತಕ್ಕೆ ಸರ್ವೆ ಬೆಡಿ ನಡೆಯಲಿದೆ

Leave A Reply