Home Interesting ಚಳಿಯಿಂದ ರಕ್ಷಿಸಿಕೊಳ್ಳಲು ಈತ ಮಾಡಿದ ಖತರ್ನಾಕ್ ಪ್ಲಾನ್ ಏನು ಗೊತ್ತಾ?? | ಈತನ ಈ ಐಡಿಯಾಕ್ಕೊಂದು...

ಚಳಿಯಿಂದ ರಕ್ಷಿಸಿಕೊಳ್ಳಲು ಈತ ಮಾಡಿದ ಖತರ್ನಾಕ್ ಪ್ಲಾನ್ ಏನು ಗೊತ್ತಾ?? | ಈತನ ಈ ಐಡಿಯಾಕ್ಕೊಂದು ಚಪ್ಪಾಳೆ ಕೊಡ್ಲೇಬೇಕೇನೋ….?!!

Hindu neighbor gifts plot of land

Hindu neighbour gifts land to Muslim journalist

ಕಳೆದೊಂದು ವಾರದಿಂದ ಚಳಿಗಾಲ ಆರಂಭವಾದ ಲಕ್ಷಣ ಕಾಣುತ್ತಿದೆ. ಈ ಚುಮುಚುಮು ಚಳಿಯಿಂದ ತಪ್ಪಿಸಿಕೊಳ್ಳಲು ಮೈತುಂಬಾ ಬಟ್ಟೆ, ಸ್ವೆಟರ್, ಜರ್ಕಿನ್, ಹ್ಯಾಂಡ್ ಗ್ಲೌಸ್ ಹಾಕೋದು ಕಾಮನ್. ಇದಾಗಿಯೂ ಚಳಿಯನ್ನು ತಡಿಯೋಕೆ ಆಗ್ತಿಲ್ಲ ಅಂದ್ರೆ ಸ್ಥಳೀಯವಾಗಿ ಸಿಗುವ ಕಟ್ಟಿಗೆಯಿಂದ ಬೆಂಕಿ ಕಾಯಿಸಿಕೊಳ್ತಾರೆ. ಆದರೆ, ಇಲ್ಲೊಬ್ಬ ಭೂಪ ಬೈಕ್‌ಗೆ ಬೆಂಕಿ ಇಟ್ಟು ಮೈಬಿಸಿ ಮಾಡಿಕೊಂಡಿದ್ದಾನೆ !!

ಹೌದು, ಇಂತಹ ವಿಚಿತ್ರ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ನಡೆದಿದೆ. ಚಳಿಯಿಂದ ಪಾರಾಗಲು ಬೈಕ್‌ಗೆ ಬೆಂಕಿ ಇಟ್ಟ ವ್ಯಕ್ತಿಯ ಹೆಸರು ಛೋಟಾ ಸರ್ಫರಾಜ್. ಅಂದಹಾಗೆ ಈ ಬೈಕ್ ಸ್ವಂತದ್ದಲ್ಲ, ಕದ್ದದ್ದು.

ಕೆಲ ದಿನಗಳ ಹಿಂದೆ ದರೋಡೆಗೆ ಯತ್ನಿಸಿದ್ದ ಛೋಟಾ ಸರ್ಫರಾಜ್ ಮತ್ತು ಈತನ ನಾಲ್ವರು ಸಹಚರರನ್ನು ಯಶೋಧರನಗರ ಪೊಲೀಸರು ಬಂಧಿಸಿದ್ದರು. ಆಗ ಛೋಟಾ ಸರ್ಫರಾಜ್ ಗ್ಯಾಂಗ್ 10 ಬೈಕ್ ಕಳವು ಮಾಡಿದ್ದರ ಬಗ್ಗೆಯೂ ಬಯಲಾಗಿತ್ತು. ಈ ಪೈಕಿ 9 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನೊಂದು ಬೈಕ್ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸಿಕ್ಕಿದೆ.

ಪೊಲೀಸರ ತನಿಖೆಯಲ್ಲಿ ಆರೋಪಿ ಛೋಟಾ ಸರ್ಫರಾಜ್ ಬಾಯ್ದಿಟ್ಟಿದ್ದು, ತಾನು ಪೊಲೀಸರಿಂದ ತಲೆಮರೆಸಿಕೊಳ್ಳಲು ಗದ್ದೆಯೊಂದರಲ್ಲಿ ರಾತ್ರಿವೇಳೆ ಅಡಗಿದ್ದೆ. ಸಿಕ್ಕಾಪಟ್ಟೆ ಚಳಿ ಇತ್ತು, ಮೈ ನಡುಗುತ್ತಿತ್ತು. ಚಳಿ ತಡೆಯಲಾರದೆ ತನ್ನೊಂದಿಗಿದ್ದ ಕದ್ದ ಬೈಕ್‌ಗೆ ಬೆಂಕಿ ಇಟ್ಟು ಮೈಬಿಸಿ ಮಾಡಿಕೊಂಡಿದ್ದೆ ಎಂದಿದ್ದಾನೆ. ಇನ್ನು ಆ ಬೈಕ್ ಕೇಳಬೇಕೆ ಸಂಪೂರ್ಣ ಸುಟ್ಟು ಕರಕಲಾಗಿ ಹೋಗಿದೆ.