Home News ಮಾಜಿ ಪತ್ನಿಗೆ ವಿಚ್ಛೇದನ ಪರಿಹಾರ ನೀಡಲು ದುಬೈ ದೊರೆಗೆ ಆದೇಶಿಸಿದ ಹೈಕೋರ್ಟ್ | ಆಕೆಗೆ ನೀಡಬೇಕಾದ...

ಮಾಜಿ ಪತ್ನಿಗೆ ವಿಚ್ಛೇದನ ಪರಿಹಾರ ನೀಡಲು ದುಬೈ ದೊರೆಗೆ ಆದೇಶಿಸಿದ ಹೈಕೋರ್ಟ್ | ಆಕೆಗೆ ನೀಡಬೇಕಾದ ಜೀವನಾಂಶದ ಮೊತ್ತ ಎಷ್ಟು ಗೊತ್ತಾ??

Hindu neighbor gifts plot of land

Hindu neighbour gifts land to Muslim journalist

ಮಾಜಿ ಪತ್ನಿಗೆ ವಿಚ್ಛೇದನ ಪರಿಹಾರ ಹಾಗೂ ಮಕ್ಕಳ ಭದ್ರತೆಗಾಗಿ ಬರೋಬ್ಬರಿ 550 ಮಿಲಿಯನ್ ಪೌಂಡ್ (5509 ಕೋಟಿ ರೂ.) ನೀಡುವಂತೆ ಲಂಡನ್ ಹೈಕೋರ್ಟ್, ದುಬೈ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತಮ್‌ಗೆ ಆದೇಶ ನೀಡಿದ್ದು, ಇದು ವಿಶ್ವದಲ್ಲೇ ಅತಿದೊಡ್ಡ ವಿಚ್ಛೇದನ ಪರಿಹಾರ ಎಂದು ಹೇಳಲಾಗಿದೆ.

ಲಂಡನ್ ಕುಟುಂಬ ನ್ಯಾಯಾಲಯ ವಿಧಿಸಿದ ಅತಿದೊಡ್ಡ ಮೊತ್ತದ ಜೀವನಾಂಶ ಶಿಕ್ಷೆ ಇದಾಗಿದ್ದು, ಮಕ್ಕಳು ಅಪ್ರಾಪ್ತರಾಗಿರುವಾಗ ಅವರ ಭದ್ರತಾ ವೆಚ್ಚಗಳನ್ನು ಭರಿಸಲು ವರ್ಷಕ್ಕೆ 11 ಮಿಲಿಯನ್ ಪೌಂಡ್‍ಗಳನ್ನೂ ಇದು ಒಳಗೊಂಡಿದೆ. ಈ ಕುಟುಂಬಕ್ಕೆ ವಿಶಿಷ್ಟವಾದ ಕಠಿಣ ಭದ್ರತೆ ಅಗತ್ಯವಿದೆ. ಬೇರೆ ಯಾರಿಂದಲೂ ಅಲ್ಲ. ಅವರ ತಂದೆ ಶೇಖ್ ಮೊಹಮ್ಮದ್ ಅವರಿಂದಲೇ ಅವರಿಗೆ ಅಪಾಯ ಇದೆ ಎಂದು ನ್ಯಾಯಾಧೀಶ ಫಿಲಿಪ್ ಮೂರ್ ಹೇಳಿದ್ದಾರೆ.

ತನ್ನ ಬಾಡಿಗಾರ್ಡ್ ನೊಂದಿಗೆ ಸಂಬಂಧ ಹೊಂದಿದ್ದ ರಾಜಕುಮಾರಿ ಹಯಾಜೀ ಜೀವಭಯದ ಕಾರಣ 2019ರಲ್ಲಿ ಹಯಾ ಅವರು ಪತಿಯನ್ನು ತೊರೆದು ಬ್ರಿಟನ್‍ಗೆ ತೆರಳಿದ್ದರು. ಒಂದು ತಿಂಗಳ ಬಳಿಕ ಶೇಖ್ ಮಹಮ್ಮದ್ ಅವರಿಗೆ ವಿಚ್ಛೇದನ ನೀಡಿದ್ದರು. ತನ್ನ ಪತಿಯಿಂದ ಭಯಭೀತಳಾಗಿದ್ದೇನೆ. ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಗಲ್ಫ್ ಎಮಿರೇಟ್‍ಗೆ ಬಲವಂತವಾಗಿ ಹಿಂದಿರುಗಲು ಆದೇಶಿಸಿದ್ದಾರೆ ಎಂದು ಆರೋಪಿಸಿದ್ದರು.

ಶೇಖ್ ಮೊಹಮ್ಮದ್ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿಯಾಗಿದ್ದು, ಪ್ರಮುಖ ಕುದುರೆ ತಳಿಗಾರ. ಬ್ರಿಟನ್ನಿನ ರಾಣಿ ಎಲಿಜಬೆತ್ ಅವರೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ.