ಬೈಲು ಬೈಲುಗಳಲ್ಲಿ, ಮನೆ ಮನೆ ಗಳಲ್ಲಿ ಅನುರಣಿಸುತಿದೆ ಭಜನಾ ಸಂಕೀರ್ತನೆ, ತಾಳದ ಝೇಂಕಾರ |ಸವಣೂರು ಮುಗೇರು ಭಜನ ಮಂಡಳಿಯಿಂದ ನಗರ ಭಜನೆ ಆರಂಭ
ಮುಗೇರು ಶ್ರೀ ಮಹಾವಿಷ್ಣು ಭಜನಾ ಮಂಡಳಿ , ಮುಗೇರು, ಸವಣೂರು ವತಿಯಿಂದ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯಾಪ್ತಿಯಲ್ಲಿ ನಗರಭಜನೆ ಈ ವರ್ಷದಿಂದ ಆರಂಭವಾಗಿದೆ.
2020 ಮಾರ್ಚ್ 14,ಶನಿವಾರ ಸಂಕ್ರಮಣ ದಂದು ಪ್ರಾರಂಭಗೊಂಡು ದೇವಸ್ಥಾನಕ್ಕೆ ಸಂಬಂದಿಸಿದ ಪ್ರತೀ ಮನೆಗಳಿಗೆ ಭಜನಾ ತಂಡದ 20 ರಿಂದ 25 ಪುರುಷರು , ಮಹಿಳೆಯರು, ಕಿಶೋರ ಕಿಶೋರಿಯರು ತೆರಳಿ ಮನೆಯವರ ಉಪಸ್ಥಿತಿಯಲ್ಲಿ ಭಜನಾ ಸೇವೆಯನ್ನು ನೆರವೇರಿಸಿ ಮುಂದಿನ ಮನೆಗಳಿಗೆ ತೆರಳುತ್ತಾರೆ.
ದಿನದಲ್ಲಿ 15 ರಿಂದ 20 ಮನೆಗಳಲ್ಲಿ ಭಜನಾ ಸೇವೆಯನ್ನು ಪೂರೈಸುತ್ತಾರೆ. ಮಾರ್ಚ್ 25 ಮತ್ತು 26 ರಂದು ನಡೆಯಲಿರುವ ದೇವಳದ ವಾರ್ಷಿಕ ಜಾತ್ರೋತ್ಸವಕ್ಕೆ ಊರ ಭಕ್ತರನ್ನು ಆಮಂತ್ರಿಸುವ ಕಾರ್ಯವೂ ಕೂಡ ಈ ಮೂಲಕ ಆಗುತ್ತಿರುವುದು ಭಕ್ತರ ಮತ್ತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮೆಚ್ಚುಗೆ ಮತ್ತು ಅಭಿಮಾನಕ್ಕೆ ಪಾತ್ರವಾಗಿದೆ.
ಇದೊಂದು ಅತ್ತ್ಯುತ್ತಮವಾದ ಕಾರ್ಯವೆಂದು ಸರ್ವ ಭಕ್ತರು ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ.
ಮನೆ ಮನೆಯಲ್ಲಿ ಧಾರ್ಮಿಕ ಜಾಗೃತಿ ಆಗಬೇಕು ಜೊತೆಗೆ ಸಂಸ್ಕಾರ, ಸಂಸ್ಕೃತಿ, ಹಿಂಧೂ ಧರ್ಮದ ಆಚಾರ ವಿಚಾರಗಳು ಮತ್ತೆ ಪ್ರವರ್ಧಮಾನಕ್ಕೆ ಬರಬೇಕೆಂಬ ಆಶಯ ಈ ಧರ್ಮ ಜಾಗೃತಿ ಭಜನಾ ಅಭಿಯಾನದ ಹಿಂದಿರುವ ಉದ್ದೇಶವಾಗಿದ್ದು ಇದು ನಿಜಕ್ಕೂ ಆಶಾದಾಯಕ ಬೆಳವಣಿಗೆ ಮತ್ತು ಪ್ರಸ್ತುತ ದಿನಮಾನದ ಅತ್ಯಂತ ಅಗತ್ಯವಿರುವ ಮಹತ್ಕಾರ್ಯ , ದೇವಸ್ಥಾನಕ್ಕೆ ಭಕ್ತರು ಬರುವಂತೆ ಪ್ರೇರೆಪಿಸುವುದರ ಜೊತೆಗೆ ದೇವಳದ ಎಲ್ಲಾ ಚಟುವಟಿಕೆಗಳಲ್ಲಿ, ಧಾರ್ಮಿಕ ಕಾರ್ಯಗಳಲ್ಲಿ ಅವರು ಮುಂದಿನದಿನಗಳಲ್ಲಿ ತೊಡಗಿಕೊಳ್ಳುವಂತೆ ಮಾಡಲು ನಗರಭಜನೆ ಸಹಕಾರಿಯಾಗಲಿದೆ. ಭಜನಾ ಮಂಡಳಿಯ ಸರ್ವಪದಾಧಿಕಾರಿಗಳು, ಸದಸ್ಯರುಗಳ ಉತ್ಸಾಹದ ಪಾಲ್ಗೊಳ್ಳುವಿಕೆ ಅಭಿನಂದನಾರ್ಹ….
ಕಟೀಲಿನ ತಾಯಿಯ ಬ್ರಹ್ಮಕಲಶೋತ್ಸವದ ಸಂಧರ್ಭದಲ್ಲಿ ಶ್ರೀ ಕ್ಷೇತ್ರ ಕಟೀಲಿನಲ್ಲಿ ಭಜನಾ ಸೇವೆಯ ಅವಕಾಶವನ್ನು ಪಡೆದ ನಮ್ಮ ಈ ಭಜನಾಮಂಡಳಿಯ ಸದಸ್ಯರು ಆ ಸಂದರ್ಭದಲ್ಲಿ ಅಲ್ಲಿ ದೊರೆತ ಸೂಚನೆಯನ್ನು ನಗರ ಭಜನೆ ಯ ಮೂಲಕ ಅನುಷ್ಠಾನ ಗೊಳಿಸುತ್ತಾ ಪ್ರತೀ ಮನೆಯಲ್ಲೂ ಇನ್ನು ಮುಂದೆ ಭಜನೆ ನಡೆಯಬೆಕೆಂಬ ಪ್ರಯತ್ನವನ್ನು ಮಾಡುತ್ತಿರುವುದು ಉತ್ತಮ ವಿಚಾರ..
ನಮ್ಮೂರಿನ ದೇವಸ್ಥಾನದ ಭಜನಾಮಂಡಳಿಯ ಯುವ ಭಕ್ತ ಸಮುದಾಯ ಈ ರೀತಿಯಲ್ಲಿ ಧರ್ಮ ಜಾಗೃತಿ ಕಾರ್ಯದಲ್ಲಿ ತೊಡಗಿಕೊಂಡಿರುವುದು ನಿಜಕ್ಕೂ ಅಭಿಮಾನದ ಮತ್ತು ಆಶಾದಾಯಕ ವಿಚಾರ. ಇದು ನಿಜವಾಗಿಯೂ ಹಿಂಧೂ ಸಮಾಜವನ್ನು, ಸಂಸ್ಕೃತಿಯನ್ನು ಉಳಿಸುವ, ಬೆಳೆಸುವ ಕಾರ್ಯ
..ಊರ ಭಕ್ತರಾದ ನಾವೆಲ್ಲರೂ ಈ ಕಾರ್ಯವನ್ನು…. ಬೆಂಬಲಿಸೋಣ…. ಪ್ರೋತ್ಸಾಹಿಸೋಣ….. ಅಭಿನಂದಿಸೋಣ ಜೊತೆಗೆ ಅನುಕೂಲವಾದಾಗಲೆಲ್ಲ ನಮ್ಮ ಪರಿಸರದಲ್ಲಿ ನಗರಭಜನೆಯಲ್ಲಿ ಸೇರಿಕೊಳ್ಳೋಣ… ಮನೆ ಮನೆಗೆ ತೆರಳಿ ಭಜನಾ ಸೇವೆಯನ್ನು ಮಾಡೋಣ ಬಾಂಧವ್ಯವನ್ನು ಬೆಳೆಸೋಣ…. ಸಂಸ್ಕಾರಯುತ ಸಮಾಜ ಕಟ್ಟುವ ಮಹತ್ಕಾರ್ಯದಲ್ಲಿ ಕೈ ಜೋಡಿಸೋಣ….. ಇಂತಹ ಅಧ್ಬುತ ಕಾರ್ಯಕ್ಕೆ ತೊಡಗಿಸಿಕೊಂಡ ಶ್ರೀ ಮಹಾವಿಷ್ಣು ಭಜನಾ ಮಂಡಳಿ ಮುಗೇರು ಸವಣೂರು ಇದರ ಸರ್ವ ಪದಾಧಿಕಾರಿಗಳು, ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸೋಣ…. ಶುಭಹಾರೈಸೋಣ… ಕೈಜೋಡಿಸೋಣ…
-ರಾಕೇಶ್ ರೈ ಕೆಡೆಂಜಿ, ಸವಣೂರು