ಕುಕ್ಕೆ ಸುಬ್ರಹ್ಮಣ್ಯದ ದರ್ಪಣ ತೀರ್ಥ ನದಿಗೆ ಶೌಚಾಲಯದ ನೀರು | ಸ್ನಾನ ಮಾಡಿದ ಭಕ್ತ ಪರಿಶುದ್ಧ !

ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ  ಆ ಬದಿಗೆ ಇರುವುದೇ ಆದಿ ಸುಬ್ರಹ್ಮಣ್ಯ ದೇವಸ್ಥಾನ. ಆದಿ ಸುಬ್ರಹ್ಮಣ್ಯ ದೇವಸ್ಥಾನ ಮೂಲತ: ಆದಿಶೇಷನ ಆವಾಸಸ್ಥಾನ. ಅಲ್ಲಿ ಇರುವ ಹುತ್ತಗಳಿಗೆ ನಾಗ ಪೂಜೆ ನಡೆಯುತ್ತದೆ. ಆದಿ ಸುಬ್ರಹ್ಮಣ್ಯದ ದೇವಸ್ಥಾನದ ಹಿಂದೆ ಇರುವ ಸಣ್ಣ ತೊರೆಯಂತಹ ನೀರಿನ ಹರಿವೇ ದರ್ಪಣತೀರ್ಥ.

ದರ್ಪಣತೀರ್ಥವು ಸುತ್ತಮುತ್ತ ನಡೆಯುತ್ತಿರುವ ಕಲುಷಿತಗಳ ನಡುವೆಯೂ ಸಾಕಷ್ಟು ಶುದ್ಧತೆಯನ್ನು ಇವತ್ತಿಗೂ ಮೈಗೂಡಿಸಿಕೊಂಡು ಹರಿಯುತ್ತಿದೆ. ಈಗ ಬೇಸಗೆ ಆದ್ದರಿಂದ ಹರಿವು ಕ್ಷೀಣಿಸಿದೆ. ಈಗ ಪಕ್ಕದಲ್ಲೇ ಇರುವ ಶೌಚಾಲಯದ ನೀರು ಓವರ್ ಫ್ಲೋ ಆಗಿ ದರ್ಪಣ ತೀರ್ಥ ನದಿಗೆ ಸೇರುತ್ತಿದೆ. ಕೆಳಗೆ ಭಕ್ತಾದಿಗಳು ನದಿಯಲ್ಲಿ ತೀರ್ಥ ಸ್ನಾನ ಮಾಡಿ ಉರುಳು ಸೇವೆ ಮಾಡುತ್ತಾರೆ.

ಕಣ್ಣೆದುರೇ ಓವರ್ ಫ್ಲೋ ಆಗಿ, ಅದ ನೀರು ಪಕ್ಕದ ಮೆಟ್ಟಲುಗಳನ್ನು ಬಳಸಿ ಕಲುಷಿತ ನೀರು ದರ್ಪಣ ತೀರ್ಥ ಸೇರುತ್ತಿದ್ದರೂ ಅಧಿಕಾರಿಗಳು ಕಣ್ಣು ಮುಚ್ಛಿ ಹಾಯಾಗಿ ನಿದ್ರಿಸುತಿದ್ದಾರೆ.

ಈಗಾಗಲೇ ಕೊರೋನಾ ಸಾಂಕ್ರಾಮಿಕ ನಮಗೆ ಕೊಡುತ್ತಿರುವ ಕಾಟವೇ ಸಾಕಾಗಿದೆ. ಇನ್ನು ಕಾಲರಾ ಕೂಡಾ ನಮ್ಮನ್ನು ಕಾಡಬೇಕೆ ?

Leave A Reply

Your email address will not be published.